
ಭಾರತೀಯ ಸಾಂಪ್ರದಾಯಿಕ ಉಡುಪುಗಳಲ್ಲೊಂದಾದ ಕೇಸರಿ ಹಾಗೂ ಗುಲಾಬಿ ಬಣ್ಣದ ಲೆಹಂಗಾ ಹಾಗೂ ಆಭರಣಗಳನ್ನ ಧರಿಸಿರುವ ಅಮೆರಿಕದ ಗಾಯಕಿ ಹಿಂದೂ ಭಕ್ತಿಗೀತೆಯನ್ನ ಬಹಳ ಇಂಪಾಗಿ ಹಾಡಿದ್ದಾರೆ.
ದೀಪಾವಳಿ ಸಂದರ್ಭದಲ್ಲಿ ಬಹುತೇಕ ಭಾರತೀಯರ ಮನೆಯಲ್ಲಿ ಈ ಸುಂದರವಾದ ಹಿಂದಿ ಶ್ಲೋಕವನ್ನ ಕೇಳಬಹುದಾಗಿದೆ.
ಈ ಹಾಡನ್ನ ಕೇಳ್ತಿದ್ರೆ ನನ್ನಲ್ಲಿ ಹೊಸ ಚೈತನ್ಯ ಸೃಷ್ಟಿಯಾಗುತ್ತೆ ಹಾಗೂ ಭಾರತೀಯ ಸಂಸ್ಕೃತಿ ಮೇಲೆ ಇನ್ನಷ್ಟು ಪ್ರೀತಿ ಉಂಟಾಗುತ್ತೆ ಎಂದು ಗಾಯಕಿ ಮೇರಿ ಮಿಲ್ಖೆನ್ ಹೇಳಿದ್ದಾರೆ. ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾಗಿರುವ ಈ ವಿಡಿಯೋ ಹೊಸ ಟ್ರೆಂಡ್ನ್ನ ಸೆಟ್ ಮಾಡ್ತಿದೆ.
https://twitter.com/MaryMillben/status/1326348028823785472