alex Certify ಅಮೆರಿದಲ್ಲಿನ ಚೀನಾ ರಾಯಭಾರ ಕಚೇರಿ ಟ್ವಿಟರ್​​ ಖಾತೆ ಲಾಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿದಲ್ಲಿನ ಚೀನಾ ರಾಯಭಾರ ಕಚೇರಿ ಟ್ವಿಟರ್​​ ಖಾತೆ ಲಾಕ್​..!

ಕ್ಸಿನ್​ ಜಿಯಾಂಗ್​ ಪ್ರದೇಶದಲ್ಲಿ ಚೀನಾದ ನೀತಿಗಳನ್ನ ಸಮರ್ಥಿಸಿಕೊಂಡು ಟ್ವೀಟ್​ ಮಾಡಿದ್ದ ಚೀನಾದ ಅಮೆರಿಕ ರಾಯಭಾರ ಕಚೇರಿಯ ಖಾತೆಯನ್ನ ಟ್ವಿಟರ್​ ಲಾಕ್​ ಮಾಡಿದೆ. ಚೀನಾ ರಾಯಭಾರಿ ಕಚೇರಿ ಮಾಡಿರುವ ಈ ಟ್ವೀಟ್​​ ಮಾನವೀಯತೆಯ ವಿರುದ್ಧವಾಗಿದೆ ಎಂದು ಕಾರಣ ನೀಡಿ ಟ್ವಿಟರ್​ ಸಂಸ್ಥೆ ಈ ನಿರ್ಧಾರ ಕೈಗೊಂಡಿದೆ.

@ChineseEmbinUS ಎಂಬ ಹೆಸರಿನ ಟ್ವಿಟರ್​ ಖಾತೆಯಿಂದ ಚೀನಾ ರಾಯಭಾರ ಕಚೇರಿ ಈ ತಿಂಗಳಲ್ಲಿ ಟ್ವೀಟ್​ ಒಂದನ್ನ ಮಾಡಿತ್ತು. ಇದರಲ್ಲಿ ಉಯಿಘರ್​ ಮಹಿಳೆಯರು ಇನ್ಮುಂದೆ ಮಗುವನ್ನ ತಯಾರಿಸುವ ಯಂತ್ರಗಳಲ್ಲ ಎಂದು ಬರೆಯಲಾಗಿತ್ತು ಎಂದು ಚೀನಾ ಪತ್ರಿಕೆ ವರದಿ ಮಾಡಿದೆ.

ಈ ಟ್ವೀಟ್​ನ್ನ ಟ್ವಿಟರ್​ ಸಂಸ್ಥೆ ಅಳಿಸಿ ಹಾಕಿತ್ತು. ಅಲ್ಲದೇ ಈ ಟ್ವೀಟ್​ ಇನ್ಮುಂದೆ ಲಭ್ಯವಿಲ್ಲ ಎಂಬ ಲೇಬಲ್​ನ್ನೂ ಹಾಕಲಾಗಿದೆ. ಟ್ವಿಟರ್​ನ ನೀತಿಗಳನ್ನ ಉಲ್ಲಂಘಿಸಿ ಮಾಡಲಾಗುವ ಪ್ರತಿಯೊಂದು ಪೋಸ್ಟ್​ಗಳನ್ನ ಅಳಿಸಿ ಹಾಕುವ ಅಧಿಕಾರ ಟ್ವಿಟರ್​ ಕಂಪನಿಗಿದೆ. ಜನವರಿ 9ರಿಂದ ಚೀನಾ ರಾಯಭಾರ ಕಚೇರಿ ಯಾವುದೇ ಹೊಸ ಟ್ವೀಟ್​​ಗಳನ್ನ ಪೋಸ್ಟ್ ಮಾಡಿಲ್ಲ.

ಅಮೆರಿಕದಲ್ಲಿರುವ ಚೀನಾ ರಾಯಭಾರ ಕಚೇರಿ ವಿರುದ್ಧ ಟ್ವಿಟರ್​ ಸಂಸ್ಥೆ ಕೈಗೊಂಡ ಕ್ರಮದ ಬಗ್ಗೆ ಜೋ ಬಿಡೆನ್​​ ಸರ್ಕಾರ ಯಾವುದೇ ಹೇಳಿಕೆಗಳನ್ನ ಇಲ್ಲಿಯವರೆಗೆ ನೀಡಿಲ್ಲ.

ನಾವು ಚೀನಾ ರಾಯಭಾರ ಕಚೇರಿ ಮಾಡಿರುವ ಟ್ವೀಟ್​​ ಬಗ್ಗೆ ತನಿಖೆ ನಡೆಸಿದ್ದೇವೆ. ಇದು ಟ್ವಿಟರ್​ನ ನೀತಿ – ನಿಯಮಗಳನ್ನ ಉಲ್ಲಂಘಿಸುವ ಪೋಸ್ಟ್ ಆಗಿದೆ. ನಾವು ನಮ್ಮ ಧರ್ಮ, ಜಾತಿ, ವಯಸ್ಸು, ಮಾಹಾಮಾರಿ, ರಾಷ್ಟ್ರೀಯತೆ ವಿರುದ್ಧ ಅಸಂಬದ್ಧ ಮಾತುಗಳನ್ನಾಡುವವರಿಗೆ ವೇದಿಕೆ ಕಲ್ಪಿಸಲು ಸಾಧ್ಯವಿಲ್ಲ ಎಂದು ಟ್ವಿಟರ್​ ವಕ್ತಾರ ಗುರುವಾರ ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...