ಹೆಣ್ಣು ಮಗುವಿಗಾಗಿ ಹಂಬಲಿಸುತ್ತಿದ್ದ ದಂಪತಿಗೆ ಬರೋಬ್ಬರಿ 14 ಗಂಡು ಮಕ್ಕಳ ಬಳಿಕ ಹೆಣ್ಣು ಕಂದಮ್ಮನ ಜನನವಾದ ಘಟನೆ ಮಿಚಿಗನ್ನ ಗ್ರ್ಯಾಂಡ್ ರಾಪಿಡ್ಸ್ನಲ್ಲಿ ನಡೆದಿದೆ.
ಕಟೇರಿ ಹಾಗೂ ಜಾಯ್ ದಂಪತಿ ಹೆಣ್ಣು ಮಗುವಿಗಾಗಿ ಹಂಬಲಿಸುತ್ತಿದ್ದರು. ಆದರೆ 14 ಬಾರಿ ಗರ್ಭಿಣಿಯಾದರೂ ಸಹ ಕಟೇರಿಗೆ ಗಂಡು ಮಕ್ಕಳೇ ಜನಿಸಿದ್ದವು. ಆದರೆ 15ನೇ ಬಾರಿಗೆ ಗರ್ಭಿಣಿಯಾದ ಕಟೇತಿ ಗ್ರ್ಯಾಂಡ್ ರ್ಯಾಪಿಡ್ಸ್ ನಗರದ ಮೆರ್ಸಿ ಸೇಂಟ್ ಮ್ಯಾರಿಸ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಪುಟಾಣಿ ಕಂದಮ್ಮನಿಗೆ ಮ್ಯಾಗಿ ಎಂದು ಹೆಸರಿಡಲಾಗಿದೆ. ಈಕೆಯ ದೊಡ್ಡಣ್ಣನಿಗೆ ಈಗ 28 ವರ್ಷ. ಹೆಣ್ಣು ಕಂದಮ್ಮನ ಆಗಮನದಿಂದ ಈ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.