ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿರುವ ಜನರ ನೆರವಿಗೆ ನಿಂತ ಪೂರ್ವ ಅಫ್ಘಾನಿಸ್ತಾನ ಹೆರಾತ್ ನಗರದ 18 ವರ್ಷದ ಟೀನೇಜ್ ಹುಡುಗಿ ಸೊಮಯಾ ಫರೂಖಿ ನೇತೃತ್ವದ ತಂಡವೊಂದು ಕಡಿಮೆ ವೆಚ್ಚದ, ಹಗುರವಾದ ವೆಂಟಿಲೇಟರ್ ಒಂದನ್ನು ಅಭಿವೃದ್ಧಿಪಡಿಸಿದ್ದಾರೆ.
ಫರೂಖಿ ಜೊತೆಗೆ ಇನ್ನೂ ಆರು ಯುವತಿಯರು ಈ ಪ್ರಾಜೆಕ್ಟ್‌ನಲ್ಲಿ ಕೈ ಜೋಡಿಸಿದ್ದಾರೆ. ಮಾರ್ಚ್‌ನಿಂದಲೇ ಈ ಕೆಲಸಕ್ಕೆ ಮುಂದಾಗಿರುವ ಈ ತಂಡವು ರೊಬಾಟಿಕ್ಸ್ ಮೇಲೆ ತಾನು ಮಾಡುತ್ತಿರುವ ಅನೇಕ ಕೆಲಸಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದುಕೊಳ್ಳುತ್ತಿದೆ.
ಈ ಹುಡುಗಿಯರು ಅಭಿವೃದ್ಧಿಪಡಿಸುತ್ತಿರುವ ವೆಂಟಿಲೇಟರ್‌ಗೆ $700 ವೆಚ್ಚವಾಗಲಿದೆ. ಸದ್ಯ ಮಾರುಕಟ್ಟೆಗಳಲ್ಲಿ ವೆಂಟಿಲೇಟರ್‌ಗಳ ಸರಾಸರಿ ಬೆಲೆಯು $20,000 ದಷ್ಟಿದೆ.