ಅಳಿಲುಗಳು ಜನ ನಿಬಿಡ ಪ್ರದೇಶಗಳಲ್ಲಿ ಕಾಣಿಸಿಕೊಂಡರೂ ಸಹ ಜನರ ಕೈಗೆ ಸಿಗೋದಿಲ್ಲ. ಇವುಗಳ ಮುದ್ದಾದ ಮುಖವನ್ನ ನೋಡಿ ನೀವೇನಾದ್ರೂ ಅದನ್ನ ಹಿಡಿಯೋಕೆ ಹೋದರೆ ನಿಮ್ಮ ಪ್ರಯತ್ನ ವ್ಯರ್ಥವೇ ಸರಿ.
ಆದರೆ ಈ ಪುಟಾಣಿ ಅಳಿಲುಗಳೂ ಕೂಡ ಮನುಷ್ಯರನ್ನ ನಂಬುತ್ತವೆ ಅನ್ನೋದನ್ನ ತೋರಿಸುತ್ತೆ ಈ ಮುದ್ದಾದ ವಿಡಿಯೋ.
ಮನೆಯೊಂದರ ಕಿಟಕಿ ಬಳಿ ಬಂದು ಅಳಿಲೊಂದು ಕಾಯ್ತಿರುತ್ತೆ. ಮನೆಯ ಸದಸ್ಯ ಕಿಟಕಿ ಬಾಗಿಲು ತೆರೆದು ಶೇಂಗಾವನ್ನ ಕೊಡ್ತಿದ್ದಂತೆಯೇ ಅದನ್ನ ತೆಗೆದುಕೊಂಡು ಅಳಿಲು ಅಲ್ಲಿಂದ ಜಾಗ ಖಾಲಿ ಮಾಡುತ್ತೆ.
ಇದು ಪೋರ್ಟ್ಲೆಂಡ್ನ ಓರೆಗಾನ್ನಲ್ಲಿ ಶೂಟ್ ಆದ ವಿಡಿಯೋವಾಗಿದೆ. ಅಂದ ಹಾಗೆ ಅಳಿಲು ಪ್ರತಿದಿನ ಈ ಮನೆ ಕಿಟಕಿ ಹತ್ರ ಕೂತು ಒಂದು ಶೇಂಗಾಕ್ಕಾಗಿ ಕಾಯುತ್ತಂತೆ. ಐಎಫ್ಎಸ್ ಅಧಿಕಾರಿ ಸುಸಾಂತಾ ನಂದಾ ಶೇರ್ ಮಾಡಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದ ಜನರ ಮನ ಗೆದ್ದಿದೆ.