ಅದಾಗ ತಾನೇ ಜನ್ಮತಾಳಿದ ಡಜನ್‌ಗಟ್ಟಲೇ ಆಮೆಗಳು ಇಂಡೋನೇಷ್ಯಾದ ತೀರದಲ್ಲಿ ಅಡ್ಡಾಡುತ್ತಾ ಹಿಂದೂ ಮಹಾಸಾಗರದ ಒಡಲು ಸೇರುತ್ತಿರುವ ಚಿತ್ರಗಳು ವೈರಲ್ ಆಗಿವೆ.
ಅಂಗೈಯಲ್ಲಿ ಹಿಡಿದಿಟ್ಟುಕೊಳ್ಳಬಹುದಾಷ್ಟು ಪುಟ್ಟದಾದ ಈ ಮರಿಗಳು ತಮ್ಮ ರೆಕ್ಕೆಗಳನ್ನು ಆಡಿಸಿಕೊಂಡು ನಡೆದಾಡಲು ಕಲಿಯುತ್ತಿರುವುದನ್ನ ನೋಡಬಹುದಾಗಿದೆ. ಈ ಮೂಲಕ ತಮ್ಮ ಪಥಗಳನ್ನು ಗುರುತು ಮಾಡಿಕೊಳ್ಳುವ ಈ ಆಮೆ ಮರಿಗಳು ದಶಕಗಳ ಬಳಿಕ ಇದೇ ಜಾಗಕ್ಕೆ ಬಂದು ಮೊಟ್ಟೆ ಇಡುತ್ತವೆ ಎಂದು ತಜ್ಞರು ತಿಳಿಸುತ್ತಾರೆ.
“ಸಮುದ್ರದ ಆಮೆಗಳು ಸಾಮಾನ್ಯವಾಗಿ ತಮ್ಮ 25ನೇ ವಯಸ್ಸಿಗೆ ಪ್ರಬುದ್ಧವಾಗಲಿದ್ದು, ಇವುಗಳನ್ನು 25 ವರ್ಷಗಳ ಬಳಿಕ ನಾವು ನೋಡಬಹುದೇನೋ,” ಎನ್ನುತ್ತಾರೆ ಜಾವಾದ ಮೆರು ಬೆತಿರಿ ರಾಷ್ಟ್ರೀಯ ಉದ್ಯಾನದ ರೇಂಜರ್ ಅರ್ಧಿನಿ ಎಸ್ಟು ವರ್ದಾನಾ.