alex Certify ಮೆಚ್ಚುಗೆಗೆ ಪಾತ್ರವಾಗಿದೆ 91ರ ಹರೆಯದ ವೃದ್ಧನ ಉತ್ಸಾಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಚ್ಚುಗೆಗೆ ಪಾತ್ರವಾಗಿದೆ 91ರ ಹರೆಯದ ವೃದ್ಧನ ಉತ್ಸಾಹ

91 ವರ್ಷದ ಅಜ್ಜನೊಬ್ಬ ತನ್ನ ಮೊಮ್ಮಕ್ಕಳ ಜತೆ ಸೇರಿ ಡಾಲ್ಗೊನಾ ಕಾಫಿ ಮಾಡಿದ ವಿಡಿಯೋ ಯು ಟ್ಯೂಬ್ ನಲ್ಲಿ ಅಪ್‌ಲೋಡ್ ಆಗಿದ್ದು, ವೈರಲ್ ಆಗಿದೆ.

ಅವರು ಹೇಳುವ ಸೂಚನೆಗಳನ್ನು ಖುಷಿಯಿಂದ ಪಾಲಿಸುವ ಅಜ್ಜ ಕಾಫಿ ಮಾಡಿದ ನಂತರ ಅದಕ್ಕೆ ಮೊಮ್ಮಕ್ಕಳ ಸೂಚನೆಯಂತೆ ಹಾಲು ಸೇರಿಸುತ್ತಾನೆ.

ನಂತರ ಅದರ ರುಚಿ ನೋಡಿದ ಅಜ್ಜ ಇದು ಅಷ್ಟೊಂದೇನೂ ರುಚಿಯಾಗಿಲ್ಲ ಎಂದು ಹೇಳುತ್ತಾನೆ. ಆದರೂ ಆತ ಮೊಮ್ಮಕ್ಕಳ ಸೂಚನೆ‌ ಪಾಲಿಸುವಲ್ಲಿ ತುಂಬಾ ಖುಷಿಪಡುವುದು ಮುಖದಲ್ಲೇ ಗೊತ್ತಾಗುತ್ತದೆ.

ವಿಡಿಯೋ ನಡುವೆ ಒಂದಿಷ್ಟು ಇಂಗ್ಲಿಷ್ ವಿವರಣೆ ಇದ್ದು, ನೋಡಿದಲ್ಲಿ ಇಡೀ ದಿನ ನಿಮ್ಮನ್ನು ಖುಷಿಯಲ್ಲಿಡುವಂತಿದೆ.
ಅಜ್ಜ ಅಜ್ಜಿ ಮನೆಯಲ್ಲಿದ್ದರೆ ಎಲ್ಲರಿಗೂ ಖುಷಿ. ಮೊಮ್ಮಕ್ಕಳು ಅವರಿಗೆ ಆಧುನಿಕ ವಸ್ತುಗಳಾದ ಇಂಟರ್ ನೆಟ್ ಬಳಕೆ, ವಿಡಿಯೋ ಡಬ್ ಮಾಡುವುದು ಮುಂತಾದ ವಿಚಾರಗಳನ್ನು ಹೇಳಿಕೊಡುತ್ತಾರೆ.‌ ಈ ಮೂಲಕ ಅವರೂ ಇ-ಲೋಕಕ್ಕೆ ತೆರೆದುಕೊಳ್ಳುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...