ಕ್ಯಾಲಿಫೋರ್ನಿಯಾ: ಕೊರೊನಾ ವೈರಸ್ ನಿಂದ ಬಚಾವಾಗಲು ಇದುವರೆಗೂ ಯಾವುದೇ ಲಸಿಕೆ ಬಂದಿಲ್ಲ. ಲಸಿಕೆ ಲಭ್ಯವಾಗುವವರೆಗೆ ಪರಸ್ಪರ ಅಂತರ ಹಾಗೂ ಮಾಸ್ಕ್ ಧಾರಣೆ ಅನಿವಾರ್ಯವಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವವರು ಖುಷಿ ಪಡುವ ವಿಚಾರವೊಂದು ಈಗ ಹೊರ ಬಿದ್ದಿದೆ.
ಅಮೆರಿಕಾದ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಪ್ರಕಟಿಸಿದ ಜರ್ನಲ್ ನ ನಿರ್ಣಯಗಳಲ್ಲಿ ಹೊಸ ವಿಚಾರ ಅಚ್ಚರಿ ಮೂಡಿಸಿದೆ. ಪರಸ್ಪರ ಅಂತರ ಕಾಯ್ದುಕೊಳ್ಳುವವರು ನೆನಪಿನ ಶಕ್ತಿ ಉಳ್ಳವರು ಹಾಗೂ ಜಾಣರೂ ಆಗಿರುತ್ತಾರೆ ಎಂದು ಅಧ್ಯಯನ ಹೇಳಿದೆ.
ಹೆಚ್ಚಿನ ಗ್ರಹಿಕೆ, ಸಮಸ್ಯೆ ಬಗೆಹರಿಸುವ ಕೌಶಲ್ಯವನ್ನು ಅವರು ಹೊಂದಿರುತ್ತಾರೆ ಎಂದು ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾಲಯದ ಮನಃಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ವ್ಹಿವ್ಹಿ ಜಂಗ್ ಹೇಳಿದ್ದಾರೆ. ಕಳೆದ ಮಾರ್ಚ್ ನಲ್ಲಿ 850 ಜನರಿಗೆ ಪ್ರಶ್ನಾವಳಿಗಳನ್ನು ನೀಡಿ ಉತ್ತರ ಪಡೆಯಲಾಗಿತ್ತು. ಬಳಿಕ ಅಂತಿಮ ವರದಿಯನ್ನು ನೀಡಲಾಗಿದೆ.