alex Certify ಕೋರ್ಟ್​ ವಿಚಾರಣೆ ವೇಳೆ ನ್ಯಾಯಾಧೀಶೆಗೆ ಪ್ರೇಮ ನಿವೇದನೆ ಮಾಡಿದ ಕಳ್ಳ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋರ್ಟ್​ ವಿಚಾರಣೆ ವೇಳೆ ನ್ಯಾಯಾಧೀಶೆಗೆ ಪ್ರೇಮ ನಿವೇದನೆ ಮಾಡಿದ ಕಳ್ಳ..!

ಸೋಶಿಯಲ್​ ಮೀಡಿಯಾದಲ್ಲಿ ಕೋರ್ಟ್​  ಆನ್​ಲೈನ್​ ವಿಚಾರಣೆಯ ವೇಳೆ ನಡೆದ ತಮಾಷೆಯ ಘಟನೆಯೊಂದು ಸಖತ್​ ಸದ್ದು ಮಾಡ್ತಿದೆ. ವಿಡಿಯೋದಲ್ಲಿ ಒಂದು ಕಡೆ ಕಳ್ಳತನದ ಆರೋಪಿ ಡೆಮೆಟ್ರಿಯಸ್​ ಲೂಯಿಸ್​ ಇದ್ರೆ ಮತ್ತೊಂದು ಕಡೆ ವಿಚಾರಣೆಯನ್ನ ಮಹಿಳಾ ಜಡ್ಜ್​​ ತಬಿತಾ ಬ್ಲ್ಯಾಕ್​ಮನ್​ ಇದ್ದಾರೆ. ಫ್ಲೋರಿಡಾದ ಕೋರ್ಟ್​ ಒಂದರಲ್ಲಿ ಈ ವಿಚಾರಣೆ ನಡೆಸಲಾಗುತ್ತಿತ್ತು.

ಜೂಮ್​ ಅಪ್ಲಿಕೇಶನ್​ ಮೂಲಕ ನಡೆಸಲಾಗುತ್ತಿದ್ದ ವಿಚಾರಣೆಯ ವೇಳೆ ಆರೋಪಿಯನ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯ್ತು. ವಿಡಿಯೋದಲ್ಲಿ ಮಹಿಳಾ ನ್ಯಾಯಾಧೀಶೆ ತೀರ್ಪಿನ ಪ್ರತಿಯನ್ನ ಓದಲು ಆರಂಭಿಸುತ್ತಿದ್ದಂತೆಯೇ ಆರೋಪಿಯು ನ್ಯಾಯಾಧೀಶರೇ ನೀವು ನೋಡಲು ಬಹಳ ಸುಂದರವಾಗಿದ್ದೀರಾ. ನಾನು ನಿಮಗೆ ಹೇಳೋದು ಇಷ್ಟೇ ನೀವು ಬಹಳ ಸುಂದರವಾಗಿ ಇದ್ದೀರಾ. ನಾನು ನಿಮ್ಮನ್ನ ಪ್ರೀತಿಸುತ್ತಿದ್ದೇನೆ ಎಂದು ಹೇಳುವ ಮೂಲಕ ತೀರ್ಪು ಪ್ರಕಟಣೆಗೆ ಅಡ್ಡಿ ಉಂಟು ಮಾಡಿದ್ದಾನೆ.

ಆರೋಪಿ ಹೀಗೆ ಹೇಳುತ್ತಿದ್ದಂತೆಯೇ ಒಮ್ಮೆ ವಿಚಲಿತರಾದ ಮಹಿಳಾ ಜಡ್ಜ್​ ಬಳಿಕ ನಗೆಯಾಡಿದ್ದಾರೆ. ಅಲ್ಲದೇ ಎಲ್ಲಿ ಬೇಕಿದ್ದರೂ ಕಳ್ಳತನ ಮಾಡಬಹುದು. ಆದರೆ ಕೋರ್ಟ್​ನಲ್ಲಲ್ಲ ಎಂದು ಹೇಳಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್ ಆಗಿದೆ.

— Billy Corben (@BillyCorben) February 4, 2021

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...