
ಜೂಮ್ ಅಪ್ಲಿಕೇಶನ್ ಮೂಲಕ ನಡೆಸಲಾಗುತ್ತಿದ್ದ ವಿಚಾರಣೆಯ ವೇಳೆ ಆರೋಪಿಯನ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯ್ತು. ವಿಡಿಯೋದಲ್ಲಿ ಮಹಿಳಾ ನ್ಯಾಯಾಧೀಶೆ ತೀರ್ಪಿನ ಪ್ರತಿಯನ್ನ ಓದಲು ಆರಂಭಿಸುತ್ತಿದ್ದಂತೆಯೇ ಆರೋಪಿಯು ನ್ಯಾಯಾಧೀಶರೇ ನೀವು ನೋಡಲು ಬಹಳ ಸುಂದರವಾಗಿದ್ದೀರಾ. ನಾನು ನಿಮಗೆ ಹೇಳೋದು ಇಷ್ಟೇ ನೀವು ಬಹಳ ಸುಂದರವಾಗಿ ಇದ್ದೀರಾ. ನಾನು ನಿಮ್ಮನ್ನ ಪ್ರೀತಿಸುತ್ತಿದ್ದೇನೆ ಎಂದು ಹೇಳುವ ಮೂಲಕ ತೀರ್ಪು ಪ್ರಕಟಣೆಗೆ ಅಡ್ಡಿ ಉಂಟು ಮಾಡಿದ್ದಾನೆ.
ಆರೋಪಿ ಹೀಗೆ ಹೇಳುತ್ತಿದ್ದಂತೆಯೇ ಒಮ್ಮೆ ವಿಚಲಿತರಾದ ಮಹಿಳಾ ಜಡ್ಜ್ ಬಳಿಕ ನಗೆಯಾಡಿದ್ದಾರೆ. ಅಲ್ಲದೇ ಎಲ್ಲಿ ಬೇಕಿದ್ದರೂ ಕಳ್ಳತನ ಮಾಡಬಹುದು. ಆದರೆ ಕೋರ್ಟ್ನಲ್ಲಲ್ಲ ಎಂದು ಹೇಳಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.