alex Certify ಮನ ಮುದಗೊಳಿಸುತ್ತೆ ಪುಟ್ಟ ಬಾಲಕರಿಬ್ಬರ ನಿಷ್ಕಲ್ಮಶ ನಗು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನ ಮುದಗೊಳಿಸುತ್ತೆ ಪುಟ್ಟ ಬಾಲಕರಿಬ್ಬರ ನಿಷ್ಕಲ್ಮಶ ನಗು

ಇಬ್ಬರು ಪುಟ್ಟ ಬಾಲಕರು ಆರೇಂಜ್ ಸೋಡಾ ಕುಡಿಯುವಾಗ ಆನಂದಿಸುವ ಹಾಗೂ ಕೇಕೆ ಹಾಕಿ ನಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆ ಮಕ್ಕಳ ನಗುವಿಗೆ ಕಾರಣಗಳು ತಿಳಿದಿಲ್ಲ, ಆದರೆ ಅವರ ಹೃದಯಾಂತರಾಳದ ನಗು ನೆಟ್ಟಿಗರ ಮನಗೆದ್ದಿದೆ. ಇಬ್ಬರೂ ಒಂದೇ ತರಹದ ಬಟ್ಟೆಯನ್ನು ಧರಿಸಿದ್ದು ಸಹೋದರರಂತೆಯೂ ಕಾಣಿಸುತ್ತಾರೆ.

ನಿಕೋಲಾ ಮಾರಿಯಾ ರಾಬರ್ಟ್ ಎಂಬುವರು ಈ ವಿಡಿಯೋವನ್ನು ಶೇರ್ ಮಾಡಿದ್ದು, 2.5 ಲಕ್ಷ ವೀಕ್ಷಣೆ ಕಂಡಿದೆ. ಅನೇಕ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರಂತೂ, ನಾನು ಕೆಲವು ವರ್ಷಗಳಲ್ಲಿ ಈ ಇಬ್ಬರೊಂದಿಗೆ ಪಬ್ ನಲ್ಲಿ ಕುಳಿತುಕೊಳ್ಳಲು ಬಯಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...