ದಕ್ಷಿಣ ಆಫ್ರಿಕಾ: ಮುಖದ ಮಾಸ್ಕ್ ಧರಿಸಲು ಹೆಣಗಾಡಿದ ದಕ್ಷಿಣ ಆಫ್ರಿಕಾದ ಅಧ್ಯಕ್ಷರ ವರ್ತನೆ ನಗೆಪಾಟಲಿಗೆ ಒಳಗಾಗಿದೆ. ಲಾಕ್ ಡೌನ್ ನಿಯಮಾವಳಿಗಳ ಕುರಿತು ತಮ್ಮ ಮಾತು ಮುಗಿಸಿದ ನಂತರ ದಕ್ಷಿಣ ಆಫ್ರಿಕಾ ಅಧ್ಯಕ್ಷ ಕೆರಿಲ್ ರಾಂಫೋಸ್ ಫೇಸ್ ಮಾಸ್ಕ್ ಅನ್ನು ಮೂಗು ಬಾಯಿಗೆ ಆಗುವಂತೆ ಧರಿಸುವ ಬದಲು ಕಣ್ಣು ಕಾಣದಂತೆ ಹಾಕಿಕೊಂಡರು.
ಕಿವಿಗೆ ಬಾರ್ ಸಿಕ್ಕಿಸಿಕೊಳ್ಳಲಾಗದೇ ತೊಂದರೆ ಪಟ್ಟರು. ಈ ವಿಡಿಯೋ ಎಲ್ಲೆಡೆ ಹರಿದಾಡಿದ್ದು, ದೇಶದ ನಾಗರಿಕರು ಸಾಕಷ್ಟು ಟೀಕೆ ಮಾಡಿದ್ದಾರೆ.
ನೆಟ್ಟಿಗರು #ಮಾಸ್ಕ್ ಆನ್ ಚಾಲೆಂಜ್, #ಕೆರಿಲ್ ಮಾಸ್ಕ್ ಚಾಲೆಂಜ್ ಎಂದು ಟೀಕೆ ಮಾಡುತ್ತಿದ್ದಾರೆ. ಇದಕ್ಕೆ ಟಿವಿ ಸಂದರ್ಶನವೊಂದರಲ್ಲಿ ಉತ್ತರ ನೀಡಿದ ಅಧ್ಯಕ್ಷ ಕೆರಿಲ್, ” ನನ್ನ ಬಗ್ಗೆ ನಗೆಯಾಡುತ್ತಿರುವವರಿಗೆ ಒಳ್ಳೆಯದಾಗಲಿ, ಮಾಸ್ಕ್ ಹೇಗೆ ಧರಿಸುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೆ” ಎಂದಿದ್ದಾರೆ.