alex Certify ಜನ್ಮದಿನದ ಸಂಭ್ರಮದಲ್ಲಿ ಬಾತುಕೋಳಿಗೆ ಪುನರ್​ಜನ್ಮ ನೀಡಿದ ಯುವತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನ್ಮದಿನದ ಸಂಭ್ರಮದಲ್ಲಿ ಬಾತುಕೋಳಿಗೆ ಪುನರ್​ಜನ್ಮ ನೀಡಿದ ಯುವತಿ..!

ಆರೀಲ್​​ ಕಾರ್ಡೋವಾ ರೋಜಾಸ್​ ಎಂಬ ಯುವತಿ ತಮ್ಮ ಜನ್ಮದಿನದ ಮುನ್ನಾ ದಿನವನ್ನ ಪ್ರಕೃತಿ ಸೌಂದರ್ಯವನ್ನ ಕಳೆಯೋದಕ್ಕೆ ಮೀಸಲಿಡಬೇಕು ಅಂತಾ ತೀರ್ಮಾನ ಮಾಡಿದ್ರು.

ಹೀಗಾಗಿ ಬೈಕ್​ ಹತ್ತಿ ಹೊರಟ ಆರೀಲ್​​ ಜಮೈಕಾದ ಬೇ ವನ್ಯಧಾಮಕ್ಕೆ ಭೇಟಿ ನೀಡಿದ್ರು. ಆದರೆ ಈ ವೇಳೆ ಅವರ ಗಮನ ಗಾಯಗೊಂಡ ಬಾತುಕೋಳಿಯ ಮೇಲೆ ಬಿದ್ದಿದೆ.

ಪ್ರಾಣಿ ರಕ್ಷಣಾ ಕೇಂದ್ರ 5 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅನುಭವ ಹೊಂದಿದ್ದ ಆರೀಲ್​ ಬಾತುಕೋಳಿಯ ಮುಖವನ್ನ ನೋಡಿದ ಕೂಡಲೇ ಅದಕ್ಕೇನೋ ಆಗಿದೆ ಅನ್ನೋದನ್ನ ಊಹಿಸಿದ್ದರು.

ಈ ಜಾತಿಯ ಬಾತುಕೋಳಿಗಳು ಸಾಮಾನ್ಯವಾಗಿ ಉಗ್ರವಾದ ವ್ಯಕ್ತಿತ್ವ ಹೊಂದಿರುತ್ತವೆ. ಆದರೆ ಈ ಬಾತುಕೋಳಿ ಮಾತ್ರ ತಾನು ಕೂತಲ್ಲಿಂದ ಅಲುಗಾಡದೇ ನದಿಯ ದಡದ ಮೇಲೆಯೇ ಸುಮ್ಮನೇ ಇತ್ತು. ಹೀಗಾಗಿ ಆ ಬಾತುಕೋಳಿಯನ್ನ ಎತ್ತಿಕೊಂಡ ಆರೀಲ್​ ತನ್ನ ಜಾಕೆಟ್​ನ್ನ ಅದಕ್ಕೆ ಹೊದಿಸಿದ್ದಾರೆ.

17 ಪೌಂಡ್​ ತೂಕವಿದ್ದ ಆ ಬಾತುಕೋಳಿಯನ್ನ ಹೊತ್ತುಕೊಳ್ಳೋದೂ ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಗೆಳೆಯರ ಕಾರು, ಮೆಟ್ರೋದಲ್ಲೆದರ ಮೇಲೆ ಬಾತುಕೋಳಿಯ ಜೊತೆ ಪ್ರಯಾಣಿಸಿ ಅದನ್ನ ಆಸ್ಪತ್ರೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಇಷ್ಟು ಒಳ್ಳೆಯ ರೀತಿಯಲ್ಲಿ ನಾನೆಂದೂ ನನ್ನ ಜನ್ಮ ದಿನ ಆಚರಿಸಿಕೊಂಡಿರಲಿಲ್ಲ ಅಂತಾ ಆರೀಲ್​ ಸಂತೋಷ ವ್ಯಕ್ತಪಡಿಸಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...