alex Certify 26 ವರ್ಷದ ಬಳಿಕ ಮಹಿಳೆಗೆ ಎದುರಾಗಿತ್ತು ಬಿಗ್​ ಶಾಕ್​..! ಹೆತ್ತ ತಾಯಿಯಿಂದಲೇ ನಡೆದಿತ್ತು ಮಹಾಮೋಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

26 ವರ್ಷದ ಬಳಿಕ ಮಹಿಳೆಗೆ ಎದುರಾಗಿತ್ತು ಬಿಗ್​ ಶಾಕ್​..! ಹೆತ್ತ ತಾಯಿಯಿಂದಲೇ ನಡೆದಿತ್ತು ಮಹಾಮೋಸ

ನಿಮ್ಮ ಸಂಪೂರ್ಣ ಜೀವನವೇ ಒಂದು ಸುಳ್ಳಿನ ಮೇಲೆ ನಿಂತಿದೆ. ನೀವು ಹುಟ್ಟಿದಾಗಿನಿಂದ ನಿಮ್ಮದು ಎಂದುಕೊಂಡಿದ್ದ ಕುಟುಂಬ ನಿಮ್ಮದಲ್ಲ ಎಂಬ ಸತ್ಯ ಕಣ್ಮುಂದೆ ಬಂದರೆ ನೀವು ಯಾವ ರೀತಿಯಲ್ಲಿ ಶಾಕ್​ಗೆ ಒಳಗಾಗಬಹುದು..? ಅಮೆರಿಕದಲ್ಲಿನ ಮಹಿಳೆಯೊಬ್ಬರು 26 ವರ್ಷ ವಯಸ್ಸಿನವರಾಗಿದ್ದಾಗ ಇಂತಹದ್ದೇ ಒಂದು ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದಾರೆ.

ಮಹಿಳೆ ತಮ್ಮ ಜೀವನದ ಸತ್ಯವೊಂದನ್ನ ಟಿಕ್​ಟಾಕ್​ನಲ್ಲಿ ಶೇರ್​ ಮಾಡಿದ್ದಾರೆ. ತನ್ನದು ಎಂದುಕೊಂಡಿದ್ದ ಕುಟುಂಬ ನಿಜಕ್ಕೂ ನನ್ನದಲ್ಲ ಹಾಗೂ ತಾನು ತನ್ನ ನಿಜವಾದ ಕುಟುಂಬದಿಂದ ಕಿಡ್ನಾಪ್​​ ಆದ ಬಳಿಕ ದೂರಾಗಿದ್ದೇನೆ ಎಂದು ಹೇಳಿದ್ದಾರೆ.

ಬಹುಶಃ ನನಗೆ 26 ವರ್ಷ ವಯಸ್ಸಿದ್ದಿರಬಹುದು. ನಾನು ಒಳ್ಳೆಯ ಕುಟುಂಬದಲ್ಲೇ ಬೆಳೆದಿದ್ದೆ. ಹಾಗೂ ಮದುವೆಗೂ ತಯಾರಿ ನಡೆಸುತ್ತಿದ್ದೆ. ಈ ವೇಳೆ ನನ್ನ ಹೆತ್ತ ತಾಯಿಯನ್ನ ಹುಡುಕೋಕೆ ಪೊಲೀಸರ ನೆರವನ್ನ ಪಡೆಯೋದು ಒಳ್ಳೆಯ ಮಾರ್ಗ ಎಂದೆನಿಸಿತು.

ಕೂಡಲೇ ಸ್ಥಳೀಯ ಪೊಲೀಸ್​ ಠಾಣೆಗೆ ತೆರಳಿದ ನಾನು ನನ್ನ ಜನ್ಮ ಸ್ಥಳ ಹಾಗೂ ನನ್ನ ಬಗ್ಗೆ ನನಗೆ ತಿಳಿದಿದ್ದ ಕೆಲ ಮಾಹಿತಿಗಳನ್ನ ನೀಡಿದೆ. ನನಗೆ ನಿಜವಾಗಿಯೂ ನನ್ನ ಐಡೆಂಟಿಟಿ ಏನೆಂದು ತಿಳಿಯುವ ಕುತೂಹಲವಿತ್ತು. ಆದರೆ ಪೊಲೀಸರು ನೀಡಿದ ಮಾಹಿತಿಯಿಂದ ನಾನು ದಿಗ್ಭ್ರಮೆಗೊಳಗಾಗಿದ್ದೆ. ಅವರಿಗೆ ನನ್ನ ತಾಯಿ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಆದರೆ ನಾನು ಕಿಡ್ನಾಪ್​ ಆಗಿರುವ ಮಗು ಆಗಿದ್ದೆ ಎಂಬ ಶಾಕಿಂಗ್​ ವಿಚಾರ ಅಲ್ಲಿ ಬಹಿರಂಗವಾಗಿತ್ತು.

ನಾನು 1980ರಲ್ಲಿ ನನ್ನ ನಿಜವಾದ ಕುಟುಂಬದಿಂದ ದೂರಾಗಿದ್ದೆ. ಆದರೆ ಪೊಲೀಸ್​ ತನಿಖೆಯಲ್ಲಿಯೂ ನನಗೆ ಹೆಚ್ಚಿನ ಮಾಹಿತಿಯನ್ನ ಕಲೆಹಾಕಲು ಸಾಧ್ಯವಾಗಲಿಲ್ಲ. ಏಕೆಂದರೆ ಎಲ್ಲಾ ದಾಖಲೆಗಳನ್ನ ಅಳಿಸಿ ಹಾಕಲಾಗಿತ್ತು ಎಂದು ಮಹಿಳೆ ಹೇಳಿದ್ದಾರೆ .

ಆದರೆ ಸಾಕಷ್ಟು ಹುಡುಕಾಟದ ಬಳಿಕ ಪ್ರಕರಣದ ಅಸಲಿ ವಿಚಾರ ಮಹಿಳೆಯ ಕಣ್ಣೆದುರಿಗೆ ಬಂದಿದೆ. ಈಕೆಯ ಹೆತ್ತ ತಾಯಿ ಈಕೆಯನ್ನ ಮಾರಾಟ ಮಾಡಿದ್ದರಂತೆ. ಆದರೆ ಈ ಮಾರಾಟದ ವಿಚಾರ ಈ ಮಹಿಳೆಯ ನಿಜವಾದ ಅಜ್ಜಿಗೆ ತಿಳಿದಿರಲಿಲ್ಲ. ಹೀಗಾಗಿ ಆಕೆ ಮಗು ಕಾಣೆಯಾಗಿದ್ದರ ಬಗ್ಗೆ ದೂರನ್ನ ದಾಖಲಿಸಿದ್ದರು. ನನ್ನ ಹೆತ್ತ ತಾಯಿಗೆ ನನ್ನನ್ನ ಎಲ್ಲಿಗೆ ಮಾರಾಟ ಮಾಡಲಾಗಿದೆ ಎಂದು ತಿಳಿದಿದ್ದರೂ ಸಹ ಅದನ್ನ ಬಹಿರಂಗಪಡಿಸಿರಲಿಲ್ಲ. ನಾನು ಯಾರ ಮನೆಗೆ ಸೇರಿದ್ದೇನೆಂದು ತಿಳಿದಿದ್ದರೂ ಸಹ ಆಕೆ ಸುಮ್ಮನೇ ಇದ್ದಳು ಎಂದು ಹೇಳಿದ್ದಾರೆ.

ನನ್ನ ನಿಜವಾದ ತಾಯಿಯ ಮನೆಯವರು ನಾನು ಅಪಹರಣಕ್ಕೊಳಗಾಗಿದ್ದೇನೆ ಎಂದೇ ನಂಬಿದ್ದಾರೆ. ಹಾಗೂ ನಾನು ಈಗ ವಾಸಿಸುತ್ತಿರುವ ಕುಟುಂಬ ನಾನು ಹುಚ್ಚು ಮಹಿಳೆಯ ಕೈನಿಂದ ಬಚಾವಾದೆ ಎಂದು ಹೇಳಿಕೊಳ್ತಾರೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...