
ಬಹುಭಾಷಾ ವರದಿಗಾರ ಫಿಲಿಪ್ ಕ್ರೌಥರ್ ಫ್ರಾನ್ಸ್ 24ರ ಶ್ವೇತಭವನದ ಪತ್ರಕರ್ತರಾಗಿದ್ದಾರೆ. ಇಂಗ್ಲಿಷ್ ಹಾಗೂ ಫ್ರೆಂಚ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವ ಕ್ರೌಥರ್ಗೆ ಇತರೆ ಭಾಷೆಗಳ ಮೇಲೂ ಉತ್ತಮ ಹಿಡಿತವಿದೆ.
ಬ್ರಿಟಿಷ್ ತಂದೆ ಹಾಗೂ ಜರ್ಮನ್ ತಾಯಿಯ ಪುತ್ರರಾದ ಫಿಲಿಫ್, ಜರ್ಮನ್, ಫ್ರೆಂಚ್, ಸ್ಪ್ಯಾನಿಶ್, ಇಂಗ್ಲಿಷ್ ಹಾಗೂ ಪೋರ್ಚುಗೀಸ್ ಭಾಷೆಯನ್ನ ನಿರರ್ಗಳವಾಗಿ ಮಾತನಾಡಬಲ್ಲರು. ಇವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕ್ರೌಥರ್ ಟ್ಯಾಲೆಂಟ್ಗೆ ನೆಟ್ಟಿಗರು ತಲೆ ಬಾಗಿದ್ದಾರೆ.