alex Certify ಅತಿಯಾದ ಪ್ರಮಾಣದಲ್ಲಿ ಸೀಸವನ್ನ ಹೊರಚೆಲ್ತಿದೆ ಈ ಮರ..! ಕುತೂಹಲಕ್ಕೆ ಕಾರಣವಾಗಿದೆ ಸೃಷ್ಟಿಯ ವೈಚಿತ್ರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತಿಯಾದ ಪ್ರಮಾಣದಲ್ಲಿ ಸೀಸವನ್ನ ಹೊರಚೆಲ್ತಿದೆ ಈ ಮರ..! ಕುತೂಹಲಕ್ಕೆ ಕಾರಣವಾಗಿದೆ ಸೃಷ್ಟಿಯ ವೈಚಿತ್ರ್ಯ

ದಕ್ಷಿಣ ಪೆಸಿಫಿಕ್​ನ ನ್ಯೂ ಕ್ಯಾಲೆಡೋನಿಯಾ ದ್ವೀಪದಲ್ಲಿರುವ ರೇನ್​ ಫಾರೆಸ್ಟ್​ ಟ್ರೀ ಎಂಬ ಹೆಸರಿನ 20 ಮೀಟರ್​ ಉದ್ದದ ಮರ ವಿಚಿತ್ರ ಗುಣವೊಂದನ್ನ ತೋರಿಸಿದೆ.

ಇದರ ತೊಗಟೆಯನ್ನ ಕತ್ತರಿಸಿದ್ರೆ ಅದು ಪ್ರಕಾಶಮಾನವಾದ ನೀಲಿ ವರ್ಣದ ದ್ರವವನ್ನ ಹೊರಹಾಕುತ್ತೆ. ಇದರಲ್ಲಿ ಶೇಕಡಾ 25ರಷ್ಟು ಸೀಸದ ಅಂಶವಿದೆ. ಈ ಸೀಸವು ಹೆಚ್ಚಿನ ಸಸ್ಯಗಳಿಗೆ ವಿಷಕಾರಿ ಎಂದು ಪರಿಗಣಿಸಲಾಗಿದೆ.

ಇಷ್ಟೊಂದು ಪ್ರಮಾಣದ ವಿಷಕಾರಿ ಅಂಶವನ್ನ ಈ ಮರ ಹೇಗೆ ಸಹಿಸಿಕೊಂಡಿದೆ ಅನ್ನೋದೇ ಬಿಲಿಯನ್​ ಡಾಲರ್ ಪ್ರಶ್ನೆಯಾಗಿ ಉಳಿದಿದೆ. ಬಹುಶಃ ಈ ಮರಗಳು ವಿಷಕಾರಿ ಜಂತುಗಳಿಂದ ರಕ್ಷಿಸಿಕೊಳ್ಳಲು ಸೀಸ ಅಸ್ತ್ರವನ್ನ ಬಳಸಿಕೊಂಡಿರಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಆದರೆ ಮರದ ಈ ಗುಣದ ಬಗ್ಗೆ ಇನ್ನೂ ನಿಖರ ಮಾಹಿತಿ ಹೊರಬಿದ್ದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...