ದಕ್ಷಿಣ ಪೆಸಿಫಿಕ್ನ ನ್ಯೂ ಕ್ಯಾಲೆಡೋನಿಯಾ ದ್ವೀಪದಲ್ಲಿರುವ ರೇನ್ ಫಾರೆಸ್ಟ್ ಟ್ರೀ ಎಂಬ ಹೆಸರಿನ 20 ಮೀಟರ್ ಉದ್ದದ ಮರ ವಿಚಿತ್ರ ಗುಣವೊಂದನ್ನ ತೋರಿಸಿದೆ.
ಇದರ ತೊಗಟೆಯನ್ನ ಕತ್ತರಿಸಿದ್ರೆ ಅದು ಪ್ರಕಾಶಮಾನವಾದ ನೀಲಿ ವರ್ಣದ ದ್ರವವನ್ನ ಹೊರಹಾಕುತ್ತೆ. ಇದರಲ್ಲಿ ಶೇಕಡಾ 25ರಷ್ಟು ಸೀಸದ ಅಂಶವಿದೆ. ಈ ಸೀಸವು ಹೆಚ್ಚಿನ ಸಸ್ಯಗಳಿಗೆ ವಿಷಕಾರಿ ಎಂದು ಪರಿಗಣಿಸಲಾಗಿದೆ.
ಇಷ್ಟೊಂದು ಪ್ರಮಾಣದ ವಿಷಕಾರಿ ಅಂಶವನ್ನ ಈ ಮರ ಹೇಗೆ ಸಹಿಸಿಕೊಂಡಿದೆ ಅನ್ನೋದೇ ಬಿಲಿಯನ್ ಡಾಲರ್ ಪ್ರಶ್ನೆಯಾಗಿ ಉಳಿದಿದೆ. ಬಹುಶಃ ಈ ಮರಗಳು ವಿಷಕಾರಿ ಜಂತುಗಳಿಂದ ರಕ್ಷಿಸಿಕೊಳ್ಳಲು ಸೀಸ ಅಸ್ತ್ರವನ್ನ ಬಳಸಿಕೊಂಡಿರಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಆದರೆ ಮರದ ಈ ಗುಣದ ಬಗ್ಗೆ ಇನ್ನೂ ನಿಖರ ಮಾಹಿತಿ ಹೊರಬಿದ್ದಿಲ್ಲ.