alex Certify ನಾಲಿಗೆ ತುಂಡರಿಸಿದ ಯುವತಿ – ಕಚ್ಚಿಕೊಂಡು ಹಾರಿದ ಪಕ್ಷಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಲಿಗೆ ತುಂಡರಿಸಿದ ಯುವತಿ – ಕಚ್ಚಿಕೊಂಡು ಹಾರಿದ ಪಕ್ಷಿ

ಸ್ಕಾಟ್​ಲೆಂಡ್​​ನ ನಗರವೊಂದರಲ್ಲಿ ನಡೆದ ಬೀದಿ ಜಗಳದಲ್ಲಿ ಯುವತಿ ವ್ಯಕ್ತಿಯ ನಾಲಗೆಯನ್ನ ಕಚ್ಚಿದ ಘಟನೆ ನಡೆದಿದೆ. ಜೊತೆಗೆ ಅಲ್ಲಿಯೇ ಇದ್ದ ಸೀಗಲ್​ ಪಕ್ಷಿ ಕೂಡಲೇ ಕೆಳಗೆ ಹಾರಿ ಬಂದು ಆ ನಾಲಗೆ ಚೂರನ್ನ ಕಚ್ಚಿಕೊಂಡು ಹಾರಿದ ವಿಚಿತ್ರ ಘಟನೆ ನಡೆದಿದೆ.

ಜೇಮ್ಸ್ ಮೆಕೆಂಜಿ ಹಾಗೂ ಬೆಥನಿ ರ್ಯಾನ್​​ ಎಂಬಿಬ್ಬರ ನಡುವೆ ಗಲಾಟೆ ನಡೆದಿದ್ದು ಕೋಪಕೊಂಡ ಆಕೆ ಆ ವ್ಯಕ್ತಿಯ ನಾಲಗೆಯನ್ನ ಕಚ್ಚಿದ್ದಾಳೆ.

ಕೂಡಲೇ ಜಗಳ ನಡೆಯುತ್ತಿದ್ದ ಸ್ಥಳಕ್ಕೆ ಹಾರಿ ಬಂದ ಸೀಗಲ್​ ಪಕ್ಷಿ ಕ್ಷಣ ಮಾತ್ರದಲ್ಲಿ ಆ ನಾಲಗೆಯ ತುಂಡನ್ನ ಕಚ್ಚಿಕೊಂಡು ಹಾರಿ ಹೋಗಿದೆ.

ಈ ಘಟನೆ ಆಗಸ್ಟ್​ 1, 2019ರಂದು ನಡೆದಿದೆ. ಈ ಘಟನೆಯು ಕೋರ್ಟ್​ ಮೆಟ್ಟಿಲೇರಿದೆ. ಮೆಕೆಂಜಿ ಕಡೆ ಬಂದ ರಿಯಾನ್​ ಆತನನ್ನ ಚುಂಬಿಸಿದ್ದಾಳೆ. ಹಾಗೂ ಮೂರು ಸೆಂಟಿಮೀಟರ್​ ನಾಲಗೆಯ ತುಂಡನ್ನ ಕತ್ತರಿಸಿದ್ದಾಳೆ, ಕೂಡಲೇ ಮೆಕೆಂಜಿ ರಕ್ತಸಿಕ್ತವಾದ ಬಾಯಿಯಿಂದ ಎಂಜಲನ್ನ ಉಗಿದಿದ್ದಾನೆ. ಈ ವೇಳೆ ನಾಲಗೆಯ ತುಂಡಾದ ಭಾಗ ನೆಲಕ್ಕೆ ಬಿದ್ದಿದೆ. ಅದೇ ಹೊತ್ತಿಗೆ ಹಾರಿ ಬಂದ ಪಕ್ಷಿ ಈ  ನಾಲಗೆ ಚೂರನ್ನ ಎತ್ತಿಕೊಂಡು ಹಾರಿ ಹೋಗಿದೆ ಎಂದು ವಕೀಲರು ಕೋರ್ಟ್​ಗೆ ವಿವರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...