ವಿಶ್ವಾದ್ಯಂತ ಕೊರೊನಾ ಸಂಕಷ್ಟ ಮಿತಿಮೀರಿದೆ. ಹೀಗಾಗಿ ಜನಸಂದಣಿಯನ್ನ ನಿಯಂತ್ರಿಸಬೇಕು ಅಂತಾ ಸಾಂಪ್ರದಾಯಿಕ ಬೀದಿ ಮೆರವಣಿಗೆಯನ್ನ ಸ್ಪೇನ್ನಾದ್ಯಂತ ರದ್ದುಗೊಳಿಸಲಾಗಿದೆ. ಆದರೆ ಎಪಿಫ್ಯಾನಿಯಲ್ಲಿ ಕೊರೊನಾ ಮಾರ್ಗಸೂಚಿ ಉಲ್ಲಂಘಿಸದೇ ಬೀದಿ ಮೆರವಣಿಗೆ ಮಾಡೋ ಮೂಲಕ ಮೂವರು ಪುರುಷರು ತಮ್ಮ ಬುದ್ಧಿಮತ್ತೆಯನ್ನ ಪ್ರದರ್ಶಿಸಿದ್ದಾರೆ.
ಮೆಲ್ಚಿಯರ್, ಕ್ಯಾಸ್ಟರ್ ಹಾಗೂ ಬಾಲ್ತಜರ್ನ್ನು ಸ್ಪೇನ್ನಲ್ಲಿ ವ್ಯಾಪಕವಾಗಿ ಆಚರಿಸಲಾಗುತ್ತೆ. ಈ ದಿನದಂದು ಶಿಶು ಕ್ರಿಸ್ತನನ್ನು ಚಿನ್ನ ಹಾಗೂ ಸುಗಂಧ ದ್ರವ್ಯದ ಸಮೇತ ಭೇಟಿ ಮಾಡುವ ಸಂಪ್ರದಾಯವಿದೆ. ಹೀಗಾಗಿ ಈ ವಿಶೇಷ ದಿನದಂದು ಮಕ್ಕಳಿಗೆ ಉಡುಗೊರೆಯನ್ನ ನೀಡಲಾಗುತ್ತೆ.
ಹಬ್ಬ – ಹರಿದಿನಗಳಿಗೆ ಆಚರಣೆಗೆ ಲಗಾಮು ಹಾಕಲಾಗಿದ್ದರೂ ಸಹ ಮೂವರು ಪುರುಷರು ಹಾಟ್ ಬಲೂನ್ ಮೇಲೇರಿ ಆಕಾಶದಲ್ಲಿ ಹಾರಾಟದ ಮೂಲಕ ಮೆರವಣಿಗೆ ನಡೆಸುವ ಮೂಲಕ ಮಕ್ಕಳಿಗೆ ಉಡುಗೊರೆಗಳನ್ನ ತಂದಿದ್ದಾರೆ.