alex Certify ನೆಟ್ಟಿಗರ ಮನಗೆಲ್ಲುತ್ತಿದೆ ಈ ಹೃದಯವಂತನ ಫ್ರೆಂಡ್ಲಿ ಬೆಟ್ಟಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ಮನಗೆಲ್ಲುತ್ತಿದೆ ಈ ಹೃದಯವಂತನ ಫ್ರೆಂಡ್ಲಿ ಬೆಟ್ಟಿಂಗ್

ಫೇಸ್ಬುಕ್‌ನಲ್ಲಿ ಹಾಕಿರುವ ಪೋಸ್ಟ್ ಒಂದು ಭಾರೀ ಸದ್ದು ಮಾಡುತ್ತಿದೆ. ಅಮೆರಿಕದ ಡೆಲ್ವಾರ್ ನ ಕ್ಯಾಮ್ಡೆನ್‌ ಪಟ್ಟಣದ ಜೆಫ್‌ ಗ್ರವಟ್‌ ಎಂಬ ವ್ಯಕ್ತಿಯೊಬ್ಬ ಪುಟಾಣಿ ಮಕ್ಕಳೊಂದಿಗೆ ಮಾಡಿದ ಚಾಲೆಂಜ್ ಒಂದರ ಬಗ್ಗೆ ಮಾತನಾಡಿದ್ದಾರೆ.

ಪಿಜ್ಝಾ ತಿನ್ನಬೇಕು ಅಂತ ಆಸೆ ಇಟ್ಟುಕೊಂಡಿದ್ದ ಹುಡುಗರ ಬಳಗವು ಜೆಫ್‌ ಜೊತೆಗೆ ವ್ಹೀಲೀ ಚಾಲೆಂಜ್ ಒಂದನ್ನು ಇಟ್ಟಿದೆ. ಹುಡುಗರ ಬಳಗದಲ್ಲಿದ್ದ ದೊಡ್ಡವನು, ತಾನು ನಿರ್ದಿಷ್ಟ ದೂರವನ್ನು ವ್ಹೀಲಿಂಗ್ ಮಾಡಿಕೊಂಡು ತಲುಪಿದಲ್ಲಿ, ತನಗೆ $10 ಕೊಡಬೇಕೆಂದು ಜೆಫ್‌ ಜೊತೆಗೆ ಬೆಟ್ ಕಟ್ಟಿದ್ದಾನೆ. ಡಾಮಿನೋಸ್‌ನಲ್ಲಿ ಪಿಜ್ಝಾ ತಿನ್ನಬೇಕೆಂಬ ಆಸೆಯಿಂದ ಮಕ್ಕಳು ಈ ರೀತಿಯ ಚಾಲೆಂಜ್ ಮಾಡಲು ಮುಂದೆ ಬಂದಿದ್ದಾರೆ.

ಪದೇ ಪದೇ ಪ್ರಯತ್ನಿಸಿದರೂ ಸಹ ಬಾಲಕ ವ್ಹೀಲಿಂಗ್ ಮಾಡಲು ವಿಫಲನಾಗಿದ್ದಾನೆ. ಆದರೆ, ಹುಡುಗರಿಗೆ ನಿರಾಸೆ ಮಾಡಲು ಮನಸ್ಸಾಗದೇ ಜೆಫ್‌ ಅವರಿಗೆಲ್ಲಾ ಗೊತ್ತೇ ಆಗದಂತೆ ಪಿಜ್ಝಾ ತರಿಸಿಕೊಟ್ಟಿದ್ದಾರೆ. ಜೆಫ್‌ರ ಈ ಹೃದಯಶ್ರೀಮಂತಿಕೆಯು ನೆಟ್ಟಿಗರ ಮನಗೆದ್ದಿದೆ.

Group of young kids caught me on my way into the store. Asked me if I wanted to make a bet. I replied “I’m a gambling…

Posted by Jeff Gravatt on Tuesday, September 8, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...