alex Certify ಅಚ್ಚರಿ ತರಿಸುವ ಈ ವಿಚಿತ್ರ ವಿಡಿಯೋ ಫುಲ್‌ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿ ತರಿಸುವ ಈ ವಿಚಿತ್ರ ವಿಡಿಯೋ ಫುಲ್‌ ವೈರಲ್

ಸ್ಪೇನ್: ಇದೊಂಥರ ವಿಚಿತ್ರ ವಿಡಿಯೋ, ಕಾಡಿಗೆ ಬೆಂಕಿಬಿದ್ದಿದೆ, ಶರವೇಗದಲ್ಲಿ ವ್ಯಾಪಿಸುತ್ತಿದೆ. ಆದರೆ, ವಿಚಿತ್ರವೇನೆಂದರೆ ಅದು ಹಬ್ಬುತ್ತ ಬರುತ್ತಿದ್ದಂತೆ ಹುಲ್ಲುಹಾಸು ಹಸಿರಾಗುತ್ತಾ ಹೋಗುವುದಲ್ಲದೆ, ಯಾವುದೇ ಮರಕ್ಕೂ ಬೆಂಕಿ ಆವರಿಸುವುದಿಲ್ಲ. ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ.

ಕ್ಲಬ್ ಡೇ ಮೌಂಟಾನಾ ಕಲಹೋರಾ ಎಂಬ ಸಂಸ್ಥೆಯೊಂದು ಫೇಸ್ ಬುಕ್ ನಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಿತ್ತು. ಸ್ಪೇನ್ ನಲ್ಲಿ ಈ ದೃಶ್ಯಾವಳಿಯನ್ನು ಚಿತ್ರೀಕರಿಸಿದ್ದಾಗಿ ಹೇಳಿಕೊಂಡಿದೆ. ಆದರೆ, ಈ ವಿಡಿಯೋ ಪೋಸ್ಟ್ ಮಾಡುತ್ತಿದ್ದಂತೆ ಭರ್ಜರಿ ವೈರಲ್ ಆಗುತ್ತಿದೆ.

ಫೇಸ್ ಬುಕ್ ಬಳಿಕ ರೆಡ್ ಇಟ್, ಟ್ವಿಟ್ಟರ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ವೈರಲ್ ಆಗಿದ್ದಲ್ಲದೆ, ಫೇಸ್ ಬುಕ್ ಒಂದರಲ್ಲೇ 92 ಸಾವಿರ ಹಾಗೂ ಟ್ವಿಟ್ಟರ್ ನಲ್ಲಿ 6.8 ಮಿಲಿಯನ್ ವೀಕ್ಷಣೆ ಕಂಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...