alex Certify OMG: ನಾಯಿಗಳಿಗೂ ಬಂತು ಬಿಯರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG: ನಾಯಿಗಳಿಗೂ ಬಂತು ಬಿಯರ್…!

ನ್ಯೂಯಾರ್ಕ್: ಮದ್ಯ ಪ್ರಿಯರು ಇಷ್ಟು ದಿನ ತಮ್ಮ ದೋಸ್ತರ ಜತೆ ಕುಳಿತು ಬಿಯರ್ ಕುಡಿಯುವುದನ್ನು ಕೇಳಿದ್ದೆವು. ಆದರೆ, ಎಂತಹ ಕಾಲ ಬಂದೋಯ್ತು ನೋಡಿ. ಇನ್ನು ತಮ್ಮ ನಾಯಿಯ ಜತೆ ಕುಳಿತು ಬಿಯರ್ ಹೊಡಿತಿದ್ದೇನೆ ಎಂದರೆ ಅಚ್ಚರಿ ಪಡಬೇಕಿಲ್ಲ. ಏಕೆಂದರೆ ಈಗ ನಾಯಿಗಳಿಗೂ ಬೇರೆ ಬಿಯರ್ ಬಂದಿದೆ.

ಅಮೆರಿಕದ ಪ್ರಸಿದ್ಧ ಬುಷ್ ಕಂಪನಿ ನಾಯಿಗಳಿಗಾಗಿ ಬಿಯರ್ ತಯಾರಿಸಿದೆ. ವಿವಿಧ ಫ್ಲೇವರ್ ನಲ್ಲಿ ಬಿಯರ್ ಲಭ್ಯವಿದ್ದು, ಆಲ್ಕೋಹಾಲ್ ಕಂಟೆಂಟ್ ಹೊಂದಿಲ್ಲ. ಈ ಬಿಯರ್ ನಾಯಿಗಳ ಎಲುಬುಗಳ ಅಭಿವೃದ್ಧಿಗೆ ಅನುಕೂಲ ಎಂದು ಕಂಪನಿ ತಿಳಿಸಿದೆ.‌

ಅಮೆರಿಕ ರಾಷ್ಟ್ರೀಯ ನಾಯಿ ದಿನವಾದ ಆಗಸ್ಟ್ 26 ರಂದು ಬುಷ್ ಕಂಪನಿ ನಾಯಿ ಬಿಯರ್ ಬಿಡುಗಡೆ ಬಗ್ಗೆ ಟ್ವೀಟ್ ಮಾಡಿದೆ.‌ “ಬಹಳ ದಿನದ ನಂತರ ಬುಷ್ ಅಭಿಮಾನಿಗಳಿಗೆ, ನಾಯಿಯ ಮಾಲೀಕರಿಗೆ ನಾವು ಖುಷಿ ಸುದ್ದಿ ನೀಡಲು ಇಷ್ಟಪಡುತ್ತೇವೆ.‌ ತಮ್ಮ ನಾಯಿಗಳ ಜತೆ ಅವರು ಖುಷಿಯ ಕಾಲ ಕಳೆಯಲಿ ಎಂಬುದು ಬುಷ್ ಹಾರೈಕೆ” ಎಂದು ಕಂಪನಿಯ ವಿಪಿ ಡೇನಿಯಲ್ ಬ್ಲ್ಯಾಕ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...