ಆಫ್ರಿಕಾ ಆನೆಯ ಮರಿಯೊಂದು ತನ್ನ ಹಿರಿಯರೊಂದಿಗೆ ಗುಂಪಿನಲ್ಲಿ ನೀರು ಕುಡಿಯುವುದನ್ನು ಕಲಿಯುತ್ತಿರುವ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತಾ ನಂದಾ ಶೇರ್ ಮಾಡಿಕೊಂಡಿದ್ದಾರೆ.
ಪದೇ ಪದೇ ಪ್ರಯತ್ನಗಳನ್ನು ಮಾಡಿದ ಈ ಮರಿಯು ಕೊನೆಗೂ ಸೊಂಡಿಲ ನೆರವಿಲ್ಲದೇ ನದಿಯ ನೀರಿಗೆ ನೇರವಾಗಿ ಬಾಯಿ ಹಾಕಿ ನೀರು ಕುಡಿಯಲು ಸಫಲವಾಗಿರುವುದನ್ನು ನೋಡಲು ಬಲೇ ಮುದ್ದಾಗಿದೆ.
ಸಾಮಾನ್ಯವಾಗಿ ಆನೆಮರಿಗಳು 6-8 ತಿಂಗಳು ತುಂಬುವವರೆಗೂ ಸೊಂಡಿಲಿನಿಂದ ನೀರನ್ನು ಕುಡಿಯುವುದಿಲ್ಲ ಎಂಬ ವಿಚಾರ ಈ ವಿಡಿಯೋವನ್ನು ನೋಡುವವರೆಗೂ ಸಾಕಷ್ಟು ನೆಟ್ಟಿಗರಿಗೆ ತಿಳಿದೇ ಇರಲಿಲ್ಲವಂತೆ.