
ಮೈದಾನದಲ್ಲಿ ಫುಟ್ಬಾಲ್ ತರಬೇತಿ ಪಡೆಯುತ್ತಿದ್ದ 9 ವರ್ಷದ ಬಾಲಕ ಸಿಡಿಲು ಬಡಿದು ಮೃತನಾದ ಘಟನೆ ಯು.ಕೆ.ಯ ಲಂಕಾಷೈರ್‌ನಲ್ಲಿ ನಡೆದಿದೆ.
ಸಿಡಿಲು ಬಡಿತದಿಂದ ಗಂಭೀರ ಗಾಯಗೊಂಡ ಬಾಲಕ ಕುಸಿದು ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಾಗಲೇ ಇಹಲೋಕ ತ್ಯಜಿಸಿದ್ದ. ಸಿಡಿಲಿನಿಂದ ಮೃತಪಟ್ಟಿದ್ದಾನೆಂದು ಸ್ಥಳೀಯರು ನಂಬಿದ್ದರೂ ಪೊಲೀಸರು ಮಾತ್ರ ಈ ಬಗ್ಗೆ ತನಿಖೆ ಮಾಡುತ್ತಿದ್ದಾರೆ.
ಬೆರಗಾಗಿಸುತ್ತೆ ಈ ಚಿತ್ರಕ್ಕೆ ನಿಗದಿಪಡಿಸಿರುವ ಬೆಲೆ…!
ಸಂಬಂಧಪಟ್ಟ ಫುಟ್ಬಾಲ್ ಕ್ಲಬ್ ತನ್ನ ಫೇಸ್‌ಬುಕ್ ಪುಟದಲ್ಲಿ ದುರಂತ ಸುದ್ದಿಯನ್ನು ಹಂಚಿಕೊಂಡಿದೆ.
ಸಾಮಾನ್ಯವಾಗಿ ಹಿರಿಯರು ಆಡುವ ಮೈದಾನ, ಕ್ಲಬ್ ತರಬೇತಿ ಅವಧಿಯಲ್ಲಿ ಈ ಘಟನೆ ನಡೆದಿಲ್ಲ ಎನ್ನಲಾಗಿದೆ.