alex Certify ವೃದ್ಧ ವ್ಯಾಪಾರಿಯ ವಿಶೇಷ ಫ್ಲೇವರ್ ನ ಐಸ್ ಕ್ರೀಮ್ ಗೆ ಭಾರಿ ಬೇಡಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೃದ್ಧ ವ್ಯಾಪಾರಿಯ ವಿಶೇಷ ಫ್ಲೇವರ್ ನ ಐಸ್ ಕ್ರೀಮ್ ಗೆ ಭಾರಿ ಬೇಡಿಕೆ

87-Year-Old Ice Cream Seller's Flavours are Making Hungary ...

ಬೇಸಿಗೆಯ ಬೇಗೆಯಲ್ಲಿ ಹಂಗೇರಿ ಬಾಲಾಟೊನ್ ಸರೋವರದ ವೃದ್ಧ ಲ್ಯಾಸ್ಜೊಲ್ ಸ್ಜೇಕರ್ ಅವರ ಐಸ್ ಕ್ರೀಮ್ ಫ್ಲೇವರ್ ಗೆ ಭಾರಿ ಬೇಡಿಕೆ ಬಂದಿದೆ.‌ 60 ವರ್ಷದಿಂದ ಐಸ್ ಕ್ರೀಮ್ ವ್ಯಾಪಾರ ಮಾಡುತ್ತಿದ್ದ 87 ವರ್ಷದ ಸ್ಜೇಕರ್ ಅವರು ಕಳೆದ ಕೆಲ ದಿನಗಳಿಂದ ಕೊರೊನಾ ಕಾರಣಕ್ಕೆ ತಮ್ಮ ವ್ಯಾಪಾರ ಬಂದ್ ಮಾಡಿದ್ದರು.

ಕಳೆದ ಒಂದು ವಾರದಿಂದ ಮತ್ತೆ ಅಂಗಡಿ ತೆರೆದು ವ್ಯಾಪಾರ ಪ್ರಾರಂಭಿಸಿದ್ದಾರೆ. ಹಂಗೇರಿಯಲ್ಲಿ ಬಿರು ಬೇಸಿಗೆ ಇದ್ದು, 33 ರಿಂದ 34 ಡಿಗ್ರಿ ಉಷ್ಣಾಂಶವಿದೆ. ಆದರೆ, ಪ್ರಯಾಣಕ್ಕೆ ನಿರ್ಬಂಧ ಇರುವ ಕಾರಣ ಸರೋವರ, ಪಾರ್ಕ್ ಹಾಗೂ ಇತರೆಡೆ ಜನಸಂದಣಿ ಕಡಿಮೆ ಇದೆ. ಇದೆಲ್ಲದರ ನಡುವೆಯೂ ವಾರದ ಏಳೂ ದಿನ ಅವರ ಅಂಗಡಿ ತೆರೆದಿರುತ್ತದೆ. ಲಿಂಬು, ವೆನಿಲ್ಲಾ, ಚಾಕೊಲೆಟ್ ಸೇರಿ ವಿವಿಧ ಫ್ಲೇವರ್ ಗಳ ಐಸ್ ಕ್ರೀಮ್ ಅವರ ಬಳಿ ಲಭ್ಯವಿದೆ.‌

“ಕೊರೊನಾ ವೈರಸ್ ಒಂದು ಸಾಂಕ್ರಾಮಿಕ ಎಂಬುದರ ಜತೆಗೆ ವೃದ್ಧರಿಗೆ ಅಪಾಯಕಾರಿ, ಇದರಿಂದ ನಾನು ಅತಿ ಸುರಕ್ಷತೆ ತೆಗೆದುಕೊಳ್ಳುತ್ತಿದ್ದೇನೆ” ಎಂದು ಸ್ಜೇಕರ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...