alex Certify ಸಾಲಾಗಿ ನಿಂತು ‘ವಿಶ್ವ ದಾಖಲೆ’ ಮಾಡಿದ ಶ್ವಾನಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲಾಗಿ ನಿಂತು ‘ವಿಶ್ವ ದಾಖಲೆ’ ಮಾಡಿದ ಶ್ವಾನಗಳು…!

ಬರ್ಲಿನ್: ನಾಯಿಗಳು ಒಂದರ ಬೆನ್ನು ಇನ್ನೊಂದು ಹಿಡಿದು ಚುಕುಬುಕು ರೈಲಿನ ಆಟ ಆಡುವುದನ್ನು ಜರ್ಮನಿಯ 12 ವರ್ಷದ ಬಾಲಕಿ ಕಲಿಸಿದ್ದಾಳೆ. ಆಕೆಯ ಸಾಧನೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಬುಕ್‌ನಲ್ಲಿ ದಾಖಲಾಗಿದೆ.

ಅಲೆಕ್ಸಾ ಲೆಯುನ್ಬುಗರ್ ಎಂಬ ಬಾಲಕಿ ತನ್ನ 8 ನಾಯಿಗಳಿಗೆ ಈ ತರಬೇತಿ ನೀಡಿದ್ದಾಳೆ. ಅತಿ ಹೆಚ್ಚು ನಾಯಿಗಳನ್ನು ಸಾಲಿನಲ್ಲಿ ನಿಲ್ಲಿಸಿದ ಕಾರಣಕ್ಕೆ ಆಕೆಯ ಹೆಸರು ಗಿನ್ನೆಸ್ ಬುಕ್‌ನಲ್ಲಿ ದಾಖಲಾಗಿದೆ.

ಒಬ್ಬರ ಹಿಂದೆ ಒಬ್ಬರು ನಿಂತು ಮಾಡುವ ಲ್ಯಾಟಿನ್ ಅಮೆರಿಕಾದ ನೃತ್ಯಕ್ಕೆ ‘ಕೊಂಗಾ’ ಎಂಬ ಹೆಸರಿದೆ.

ಎಮ್ಮಾ, ಜೆನ್ನಿಫರ್, ಕಟಿ, ಮಾಯಾ, ನಾಲಾ, ಸಬ್ರಿನಾ, ಸಲ್ಲಿ ಮತ್ತು ಸ್ಪಿಕಿ ಎಂಬ 8 ನಾಯಿಗಳು ಗಿನ್ನೆಸ್ ಬುಕ್‌ನ ತೀರ್ಪುಗಾರರ ಎದುರು ಶ್ರದ್ಧೆಯ ವಿದ್ಯಾರ್ಥಿಯಂತೆ ಮುದ್ದಾದ ಮುಖ ಹೊತ್ತು ಒಂದರ ಬೆನ್ನಿಗೆ ಇನ್ನೊಂದು ಕಾಲು ಕೊಟ್ಟು ನಿಂತಿದ್ದವು. ಸಲ್ಲಿ ಮುಂದೆ ನಿಂತಿದ್ದರೆ ಅದರ ಹಿಂದೆ ಸುಮಾರು 5 ಮೀಟರ್‌ವರೆಗೆ ಸಾಲು ಗಟ್ಟಿದ್ದವು.

ನಾಯಿಗಳು ವಿಶ್ವ ದಾಖಲೆಗಾಗಿ ಸಾಲಿನಲ್ಲಿ ನಿಂತ ವಿಡಿಯೋವನ್ನು ಬಾಲಕಿ ಅಲೆಕ್ಸಾ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, 1.4 ಮಿಲಿಯನ್ ಜನರು ವೀಕ್ಷಿಸಿದ್ದಾರೆ.

Most Dogs In A Conga Line – Guinness World Records

Dedicated trainer Alexa from Germany taught her dogs how to conga – and they love it! ?????????

Posted by Guinness World Records on Wednesday, June 10, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...