ಬರ್ಲಿನ್: ನಾಯಿಗಳು ಒಂದರ ಬೆನ್ನು ಇನ್ನೊಂದು ಹಿಡಿದು ಚುಕುಬುಕು ರೈಲಿನ ಆಟ ಆಡುವುದನ್ನು ಜರ್ಮನಿಯ 12 ವರ್ಷದ ಬಾಲಕಿ ಕಲಿಸಿದ್ದಾಳೆ. ಆಕೆಯ ಸಾಧನೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಬುಕ್‌ನಲ್ಲಿ ದಾಖಲಾಗಿದೆ.
ಅಲೆಕ್ಸಾ ಲೆಯುನ್ಬುಗರ್ ಎಂಬ ಬಾಲಕಿ ತನ್ನ 8 ನಾಯಿಗಳಿಗೆ ಈ ತರಬೇತಿ ನೀಡಿದ್ದಾಳೆ. ಅತಿ ಹೆಚ್ಚು ನಾಯಿಗಳನ್ನು ಸಾಲಿನಲ್ಲಿ ನಿಲ್ಲಿಸಿದ ಕಾರಣಕ್ಕೆ ಆಕೆಯ ಹೆಸರು ಗಿನ್ನೆಸ್ ಬುಕ್‌ನಲ್ಲಿ ದಾಖಲಾಗಿದೆ.
ಒಬ್ಬರ ಹಿಂದೆ ಒಬ್ಬರು ನಿಂತು ಮಾಡುವ ಲ್ಯಾಟಿನ್ ಅಮೆರಿಕಾದ ನೃತ್ಯಕ್ಕೆ ‘ಕೊಂಗಾ’ ಎಂಬ ಹೆಸರಿದೆ.
ಎಮ್ಮಾ, ಜೆನ್ನಿಫರ್, ಕಟಿ, ಮಾಯಾ, ನಾಲಾ, ಸಬ್ರಿನಾ, ಸಲ್ಲಿ ಮತ್ತು ಸ್ಪಿಕಿ ಎಂಬ 8 ನಾಯಿಗಳು ಗಿನ್ನೆಸ್ ಬುಕ್‌ನ ತೀರ್ಪುಗಾರರ ಎದುರು ಶ್ರದ್ಧೆಯ ವಿದ್ಯಾರ್ಥಿಯಂತೆ ಮುದ್ದಾದ ಮುಖ ಹೊತ್ತು ಒಂದರ ಬೆನ್ನಿಗೆ ಇನ್ನೊಂದು ಕಾಲು ಕೊಟ್ಟು ನಿಂತಿದ್ದವು. ಸಲ್ಲಿ ಮುಂದೆ ನಿಂತಿದ್ದರೆ ಅದರ ಹಿಂದೆ ಸುಮಾರು 5 ಮೀಟರ್‌ವರೆಗೆ ಸಾಲು ಗಟ್ಟಿದ್ದವು.
ನಾಯಿಗಳು ವಿಶ್ವ ದಾಖಲೆಗಾಗಿ ಸಾಲಿನಲ್ಲಿ ನಿಂತ ವಿಡಿಯೋವನ್ನು ಬಾಲಕಿ ಅಲೆಕ್ಸಾ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, 1.4 ಮಿಲಿಯನ್ ಜನರು ವೀಕ್ಷಿಸಿದ್ದಾರೆ.
https://www.facebook.com/GuinnessWorldRecords/videos/262604591636936