alex Certify ಅಬ್ಬಬ್ಬಾ…! ದಾಖಲೆಗೆ ಪಾತ್ರವಾಗಿದೆ ಈ ಮಿಂಚಿನ ಉದ್ದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಬ್ಬಾ…! ದಾಖಲೆಗೆ ಪಾತ್ರವಾಗಿದೆ ಈ ಮಿಂಚಿನ ಉದ್ದ

ಬ್ರೆಜಿಲ್ ‌ನ ಆಗಸದಲ್ಲಿ ಸ್ಫೋಟಿಸಿದ ಮಿಂಚೊಂದು 709 ಕಿ.ಮೀ. ಉದ್ದವಿದ್ದು, ಅದೀಗ ದಾಖಲೆಗಳಲ್ಲಿರುವ ಅತ್ಯಂತ ಉದ್ದವಾದ ಮಿಂಚು ಎಂದು ವಿಶ್ವ ಸಂಸ್ಥೆಯ ಹವಾಮಾನ ಏಜೆನ್ಸಿ ಘೋಷಿಸಿದೆ.

ಅಕ್ಟೋಬರ್‌ 31, 2018ರಂದು ಈ ಮಿಂಚು ಬಡಿದಿದ್ದು, ಈ ಅಂತರವು ನಮ್ಮ ಬೆಂಗಳೂರಿನಿಂದ ಹೈದರಾಬಾದ್‌ ನಡುವಿನ ಅಂತರಕ್ಕಿಂತಲೂ ಉದ್ದವಿದೆ.

ಮತ್ತೊಂದು ನಿದರ್ಶನದಲ್ಲಿ, ಉತ್ತರ ಅರ್ಜೆಂಟಿನಾದ ಆಗಸದಲ್ಲಿ ಮೂಡಿದ ಮಿಂಚೊಂದು 16.73 ಸೆಕೆಂಡ್‌ಗಳ ಕಾಲ ಕಾಣಿಸಿಕೊಂಡಿದ್ದು, ಇದೂ ಸಹ ಹೊಸ ವಿಶ್ವ ದಾಖಲೆಗೆ ಪಾತ್ರವಾಗಿದೆ. ಮಾರ್ಚ್ 4, 2019ರಂದು ಕಾಣಿಸಿಕೊಂಡ ಈ ಮಿಂಚು, ಅತ್ಯಂತ ಸುದೀರ್ಘಾವಧಿಗೆ ಕಾಣಸಿಕ್ಕ ಮಿಂಚು ಎಂದು ತಿಳಿದು ಬಂದಿದೆ. ಈ ಹೊಸ ದಾಖಲೆಗಳನ್ನು ಉಪಗ್ರಹಾಧರಿತ ತಂತ್ರಜ್ಞಾನವೊಂದರಿಂದ ಸೆರೆ ಹಿಡಿಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...