ಎಲ್ಲರೊಂದಿಗೂ ಸಂತಸ ಹಂಚಿಕೊಳ್ಳುವುದು ಜೀವಮಾನದಲ್ಲಿ ನಾವು ಮಾಡುವ ಅತ್ಯಂತ ಶ್ರೇಷ್ಠ ಕೆಲಸಗಳಲ್ಲಿ ಒಂದು ಎಂದು ಆಗಾಗ ಕೇಳುತ್ತಲೇ ಬಂದಿದ್ದೇವೆ. ಇಂಟರ್ನೆಟ್ ಇರುವ ಕಾರಣದಿಂದ ನಾವು ದಿನನಿತ್ಯದ ಜೀವನದಲ್ಲಿ ಇಂಥ ಸಾಕಷ್ಟು ನಿದರ್ಶನಗಳನ್ನು ನೋಡುತ್ತಲಿದ್ದೇವೆ.
ಬ್ರಿಟನ್‌ನ ಎಸ್ಸೆಕ್ಸ್‌ನ 7 ವರ್ಷದ ತಿಮೋತಿ ಮ್ಯಾಡರ್ಸ್ ಹೆಸರಿನ ಹುಡುಗನೊಬ್ಬ, ಬ್ರಿಟನ್ ರಾಣಿ ಕ್ವೀನ್ ಎಲಿಝಬೆತ್‌ಗೆ ಪತ್ರ ಮುಖೇನ ಪುಟ್ಟದೊಂದು ಪಝಲ್ ಅನ್ನು ‘Happiness Word Search’ ಹೆಸರಿನಲ್ಲಿ ಕಳುಹಿಸಿದ್ದಾನೆ. ಸಂತಸಕ್ಕೆ ಅನ್ವರ್ಥವಾದ ಪದಗಳನ್ನು ಈ ಪಝಲ್‌ನಲ್ಲಿ ರಾಣಿಗೆ ಕೋರಲಾಗಿತ್ತು.
ಈ ಪತ್ರಕ್ಕೆ ಪ್ರತಿಕ್ರಿಯಿಸಿದ ಎಲಿಝಬೆತ್, ಬಾಲಕನ ಈ ನಡೆಯನ್ನು ಮೆಚ್ಚಿಕೊಂಡಿದ್ದು, ಪ್ರಸಕ್ತ ಪರಿಸ್ಥಿತಿಯ ನಡುವೆ ಬಾಲಕನ ಆರೋಗ್ಯ ಚೆನ್ನಾಗಿದೆ ಎಂದು ಆಶಿಸುತ್ತಿರುವುದಾಗಿ ಹೇಳಿದ್ದಾರೆ.
https://www.facebook.com/TheRoyalistsUK/posts/1502991679903525