alex Certify 50 ವರ್ಷದ ನಂತ್ರ ಸಹೋದರಿಯರನ್ನು ಒಂದು ಮಾಡಿದ ಕೊರೊನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

50 ವರ್ಷದ ನಂತ್ರ ಸಹೋದರಿಯರನ್ನು ಒಂದು ಮಾಡಿದ ಕೊರೊನಾ

ಕೊರೊನಾ ಅನೇಕ ಕೆಟ್ಟ ಸುದ್ದಿಗಳನ್ನು ಕೇಳುವಂತೆ ಮಾಡಿದೆ. ಆದ್ರೆ ಅಪರೂಪಕ್ಕೊಂದು ಒಳ್ಳೆ ಸುದ್ದಿ ಕೂಡ ಕಿವಿಗೆ ಬೀಳ್ತಿದೆ. ಕೊರೊನಾ ಕಾರಣಕ್ಕೆ ಇಬ್ಬರು ಸಹೋದರಿಯರು ಒಂದಾಗಿದ್ದಾರೆ. ಅದೂ 50 ವರ್ಷಗಳ ನಂತ್ರ.

ಘಟನೆ ನಡೆದಿರುವುದು ಯುಎಸ್ ನಲ್ಲಿ. ಬರೋ ಫ್ರೀಮಾಂಟ್, ಮೆಥೋಡಿಸ್ಟ್ ಹೆಲ್ತ್ ನಲ್ಲಿ ಡಂಕ್ಲಾವ್ ಗಾರ್ಡನ್‌  ಕೆಲಸ ಮಾಡುತ್ತಾಳೆ. 53 ವರ್ಷದ ಈಕೆ ಕೊರೊನಾದಿಂದ ಚೇತರಿಸಿಕೊಂಡ ನಂತ್ರ ವೀಕ್ ಆಗಿದ್ಲು. ತಲೆ ಸುತ್ತಿ ಕೆಳಗೆ ಬಿದ್ದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆ ಸಹೋದರಿ ಡೋರಿಸ್ ಕ್ರೀಪನ್ ಕೂಡ ಕೈ ಮುರಿದುಕೊಂಡು ಆಸ್ಪತ್ರೆ ಸೇರಿದ್ದಳು.

ಬರೋ, ಇದೇ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಾಳೆ. ಆಕೆ ಪೇಶಂಟ್ ಪಟ್ಟಿಯಲ್ಲಿ ಸಹೋದರಿ ಹೆಸರು ನೋಡಿದ್ದಾಳೆ.  ನಂತ್ರ ಆಕೆ ಪತ್ತೆ ಮಾಡಿದ್ದಾಳೆ. ಡೋರಿಸ್ 6 ತಿಂಗಳಿರುವಾಗ ಆಕೆ ತಂದೆ-ತಾಯಿ ಬೇರೆಯಾಗಿದ್ದರಂತೆ. ಆ ವೇಳೆ ತಂದೆ ಡೋರಿಸ್ ಕರೆದುಕೊಂಡು ಬೇರೆ ಮನೆಗೆ ಹೋಗಿದ್ದನಂತೆ. ಬರೋಗೆ ಸರಿಯಾಗಿ ಕೇಳುವುದಿಲ್ಲ. ಹಾಗಾಗಿ ಬೋರ್ಡ್ ಸಹಾಯದಿಂದ ಇಬ್ಬರು ಮಾತನಾಡಿಕೊಳ್ತಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...