ಯಾವುದೇ ಮಗುವಿನ ಮೊದಲ ಮಾತು ಹೆತ್ತವರಿಗೆ ಬಲೇ ಸೊಗಸಾಗಿ ಕೇಳುತ್ತದೆ. ಮೊದಲು ಮಗುವಿನ ಬಾಯಿಂದ ಅಮ್ಮ ಅಥವಾ ಅಪ್ಪ ಪದ ಬರಬೇಕು ಎಂದು ಬಹಳಷ್ಟು ಹೆತ್ತವರು ಹಾಗೇ ಸ್ವೀಟ್ ಆಗಿ ಜಗಳ ಆಡುವುದೂ ಇದೆ.
ಆಟಿಸಮ್ ಸಮಸ್ಯೆಯಿಂದ ಬಳಲುತ್ತಿದ್ದ ಐದು ವರ್ಷದ ಬಾಲಕನೊಬ್ಬ ಮೊದಲ ಬಾರಿಗೆ ಮಾತನಾಡುವ ವಿಡಿಯೋ ವೈರಲ್ ಆಗಿದೆ. ಮೈಕಾ ಹೆಸರಿನ ಈ ಬಾಲಕ ತನ್ನ ಮೊದಲ ಶಬ್ದಗಳ ಮೂಲಕ ನೆಟ್ಟಿಗರ ಮನ ಗೆಲ್ಲುತ್ತಿದ್ದಾನೆ.
ಬಾಲಕನ ತಾಯಿ ಹ್ಯಾಲೇ ಮ್ಯಾಕ್‌ಗೈರ್ ತನ್ನ ಮಗನಿಗೆ ಮಾತನಾಡಲು ಪ್ರೇರಣೆ ಕೊಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಸಂಭ್ರಮ ಹಂಚಿಕೊಂಡಿರುವ ಮ್ಯಾಕ್‌ಗೈರ್, “The first time he said his name” ಎಂದು ವಿಡಿಯೋದ ಕೆಳಗೆ ಕ್ಯಾಪ್ಷನ್ ಹಾಕಿದ್ದಾರೆ.
https://www.facebook.com/haleymessina/videos/10164135088760593/?t=0
https://www.facebook.com/haleymessina/videos/10164134970770593/?t=2