ಕೆಲವು ಮಕ್ಕಳ ಚಟುವಟಿಕೆ ವಿಶ್ವಮಾನ್ಯವಾಗಿ ಬಿಡುತ್ತದೆ, ಸಣ್ಣ ಪುಟ್ಟ ಕೆಲಸಗಳು ಮಾದರಿಯಾಗಿಬಿಡುತ್ತದೆ. ಇಂಥದ್ದೇ ಒಂದು ಘಟನೆ ಯುಕೆಯಲ್ಲಿ ನಡೆದಿದೆ.
ಸೋಫಿಯಾ ರೋಸ್ ಫ್ರೈ ಎಂಬಾಕೆಗೆ ಇನ್ನು ಐದು ವರ್ಷದ ಹರೆಯ. ಈಕೆ ಲಾಕ್ ಡೌನ್ ಸಂದರ್ಭದಲ್ಲಿ ಕೆಲಸಗಾರರು ಮತ್ತು ಮಕ್ಕಳಿಗೆ 1000ಕ್ಕೂ ಹೆಚ್ಚು ಕೈಚೀಲಗಳನ್ನು ತಲುಪಿಸಿದ್ದಾಳೆ.
ಚೀಲಗಳಲ್ಲಿ ಮಕ್ಕಳ ಆಟಿಕೆ, ಹ್ಯಾಂಡ್ ಮೇಡ್ ರಿಂಗ್, ಆಟಿಕೆ, ಸಿಹಿ ತಿಂಡಿಗಳನ್ನು ಇಟ್ಟು ವಿತರಿಸಿದ್ದಾಳೆ. ಪೊಲೀಸರೂ, ಆಂಬ್ಯುಲೆನ್ಸ್ ಚಾಲಕರಿಗೂ ನೀಡಿ ಮೆಚ್ಚುಗೆ ಪಡೆದಿದ್ದಾಳೆ.
ಮಗಳ ಈ ಕಾರ್ಯವನ್ನು ಹೆಮ್ಮೆ ಪಡುತ್ತೇನೆ ಎಂದು ಹೇಳಿರುವ ಅವರ ತಾಯಿ, ಆಕೆ ಸ್ಪೂರ್ತಿ ಎಂದೂ ಬಣ್ಣಿಸಿದ್ದಾರೆ. ಮಗಳ ಈ ಕೆಲಸಕ್ಕೆ ಹಾಗೂ ಆಕೆಯ ಜೊತೆಗೆ ನಿಂತ ಅಮ್ಮ, ಇಬ್ಬರಿಗೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ದೇಣಿಗೆಯನ್ನೂ ನೀಡಿದ್ದಾರೆ.