ಪಾಕಿಸ್ತಾನದ ಜನನಿಬಿಡ ರಸ್ತೆಯಲ್ಲಿ ಕಾರು ಚಲಾಯಿಸಿದ 5 ವರ್ಷದ ಪೋರ…! 28-01-2021 8:02PM IST / No Comments / Posted In: Latest News, International ಅಪ್ರಾಪ್ತ ಬಾಲಕನೊಬ್ಬ ಪಾಕಿಸ್ತಾನದ ಜನನಿಬಿಡ ರಸ್ತೆಯಲ್ಲಿ ಎಸ್ಯುವಿ ಕಾರನ್ನ ಚಲಾಯಿಸಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದ್ದು ಪೋಷಕರನ್ನ ಪೊಲೀಸರು ವಿಚಾರಣೆಗೆ ಕರೆಯಿಸಿದ್ದಾರೆ. ಸಣ್ಣ ವಿಡಿಯೋ ತುಣುಕಿನಲ್ಲಿ 5 ವರ್ಷದ ಬಾಲಕ ಕಾರನ್ನ ಚಲಾಯಿಸ್ತಾ ಇರೋದನ್ನ ಕಾಣಬಹುದಾಗಿದೆ. ಅಂದಹಾಗೆ ಇದು ಪಾಕಿಸ್ತಾನದ ಅತ್ಯಂತ ಬ್ಯುಸಿ ರಸ್ತೆಗಳಲ್ಲಿ ಒಂದಾದ ಬೊಸಾನ್ ರೋಡ್ನಲ್ಲಿ ಚಿತ್ರೀಕರಿಸಲಾಗಿದೆ. ಕಾರಿನಲ್ಲಿ ಯಾವ ವಯಸ್ಕರೂ ಇಲ್ಲ ಅನ್ನೋದನ್ನ ನೀವಿಲ್ಲಿ ಗಮನಿಸಬಹುದಾಗಿದೆ. ಟೋಕಿಯೋ ಒಲಿಂಪಿಕ್ ರದ್ದಾದರೆ ಇನ್ಶುರೆನ್ಸ್ ಹೂಡಿಕೆದಾರರಿಗಾಗುವ ನಷ್ಟವೆಷ್ಟು ಗೊತ್ತಾ….? ಆದರೆ ಈ ಪುಟಾಣಿ ಹುಡುಗ ವಾಹನ ಚಲಾಯಿಸ್ತಾ ಇದ್ದರೂ ಸಹ ಯಾವುದೇ ಪೊಲೀಸರ ಕಣ್ಣಿಗೆ ಬಿದ್ದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆದ ಬಳಿಕವೇ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಪೋಷಕರ ಅಜಾಗರೂಕತೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. A small kid driving Landcruiser in Multan 😳 how’s his feet even touching pedals. Whose kid is this 😂 pic.twitter.com/h5AXZztnYb — Talha (@talhaamjad_) January 26, 2021