alex Certify ಮಿಲಿಯನ್ ಡಾಲರ್ ಗೆದ್ದ ಭಾರತೀಯ ಸಂಜಾತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಿಲಿಯನ್ ಡಾಲರ್ ಗೆದ್ದ ಭಾರತೀಯ ಸಂಜಾತ

ಬರ್ಹೆನ್: ಭಾರತೀಯ ಮೂಲದ ವ್ಯಕ್ತಿಯೊಬ್ಬ ದುಬೈನಲ್ಲಿ ಭಾರಿ ದೊಡ್ಡ ಮೊತ್ತದ ಲಾಟರಿ ಗೆದ್ದು ಸುದ್ದಿಯಾಗಿದ್ದಾರೆ.

ಬರ್ಹೆನ್ ನ ಖಾಸಗಿ ಕಂಪನಿಯಲ್ಲಿ ಸೇಲ್ಸ್ ಮೆನ್ ಆಗಿರುವ 33 ವರ್ಷದ ಸುನೀಲ ಕುಮಾರ ಕಾತೂರಿಯಾ ದುಬೈನ ಡ್ಯೂಟಿ ಫ್ರೀ ಎಂಬ ಆನ್ ಲೈನ್ ಲಾಟರಿಯಲ್ಲಿ 1 ಮಿಲಿಯನ್ ಡಾಲರ್ ಎಂದರೆ 7.39 ಕೋಟಿ ರೂ. ಗೆದ್ದಿದ್ದಾರೆ.‌

ಬರ್ಹೆನ್ ಮನಾಮಾ ನಿವಾಸಿಯಾಗಿರುವ ಅವರು, ಈ ಲಾಟರಿ ಗೆದ್ದ 342 ನೇ ವ್ಯಕ್ತಿಯಾಗಿದ್ದಾರೆ. 170 ನೇ ಭಾರತೀಯರಾಗಿದ್ದಾರೆ. ಅ. 17 ರಂದು ಆನ್ ಲೈನ್ ಲಾಟರಿ ಖರೀದಿಸಿದ್ದರು. ಡ್ಯೂಟಿ ಫ್ರೀ ಲಾಟರಿ ಕಂಪನಿ ಹೇಳುವ ಪ್ರಕಾರ ಅತಿ ಹೆಚ್ಚು ಭಾರತೀಯರು ಈ ಲಾಟರಿ ಖರೀದಿಸುತ್ತಾರೆ.

“ನನ್ನ ತಂದೆಯ ಕಾಲದಿಂದಲೂ ನಾವು ಬರ್ಹೆನ್ ನಲ್ಲೇ ಜೀವಿಸುತ್ತಿದ್ದೇವೆ. ನಾನು 10 – 12 ವರ್ಷಗಳಿಂದ ದುಬೈಗೆ ಭೇಟಿ ಕೊಡುತ್ತಿದ್ದೇನೆ ಹಾಗೂ ಈ ಲಾಟರಿ ಖರೀದಿಸುತ್ತಿದ್ದೇನೆ. ಈಗ ಗೆದ್ದ ಮೊತ್ತದಲ್ಲಿ ಒಂದಿಷ್ಟನ್ನು ದಾನ ಮಾಡುತ್ತೇನೆ. ಹಾಗೂ ಒಂದು ಮನೆ ಖರೀದಿಸುತ್ತೇನೆ” ಎಂದು ಸುನೀಲ ಕುಮಾರ ಕಾತೂರಿಯಾ ಗಲ್ಫ್ ನ್ಯೂಸ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...