ಬರ್ಹೆನ್: ಭಾರತೀಯ ಮೂಲದ ವ್ಯಕ್ತಿಯೊಬ್ಬ ದುಬೈನಲ್ಲಿ ಭಾರಿ ದೊಡ್ಡ ಮೊತ್ತದ ಲಾಟರಿ ಗೆದ್ದು ಸುದ್ದಿಯಾಗಿದ್ದಾರೆ.
ಬರ್ಹೆನ್ ನ ಖಾಸಗಿ ಕಂಪನಿಯಲ್ಲಿ ಸೇಲ್ಸ್ ಮೆನ್ ಆಗಿರುವ 33 ವರ್ಷದ ಸುನೀಲ ಕುಮಾರ ಕಾತೂರಿಯಾ ದುಬೈನ ಡ್ಯೂಟಿ ಫ್ರೀ ಎಂಬ ಆನ್ ಲೈನ್ ಲಾಟರಿಯಲ್ಲಿ 1 ಮಿಲಿಯನ್ ಡಾಲರ್ ಎಂದರೆ 7.39 ಕೋಟಿ ರೂ. ಗೆದ್ದಿದ್ದಾರೆ.
ಬರ್ಹೆನ್ ಮನಾಮಾ ನಿವಾಸಿಯಾಗಿರುವ ಅವರು, ಈ ಲಾಟರಿ ಗೆದ್ದ 342 ನೇ ವ್ಯಕ್ತಿಯಾಗಿದ್ದಾರೆ. 170 ನೇ ಭಾರತೀಯರಾಗಿದ್ದಾರೆ. ಅ. 17 ರಂದು ಆನ್ ಲೈನ್ ಲಾಟರಿ ಖರೀದಿಸಿದ್ದರು. ಡ್ಯೂಟಿ ಫ್ರೀ ಲಾಟರಿ ಕಂಪನಿ ಹೇಳುವ ಪ್ರಕಾರ ಅತಿ ಹೆಚ್ಚು ಭಾರತೀಯರು ಈ ಲಾಟರಿ ಖರೀದಿಸುತ್ತಾರೆ.
“ನನ್ನ ತಂದೆಯ ಕಾಲದಿಂದಲೂ ನಾವು ಬರ್ಹೆನ್ ನಲ್ಲೇ ಜೀವಿಸುತ್ತಿದ್ದೇವೆ. ನಾನು 10 – 12 ವರ್ಷಗಳಿಂದ ದುಬೈಗೆ ಭೇಟಿ ಕೊಡುತ್ತಿದ್ದೇನೆ ಹಾಗೂ ಈ ಲಾಟರಿ ಖರೀದಿಸುತ್ತಿದ್ದೇನೆ. ಈಗ ಗೆದ್ದ ಮೊತ್ತದಲ್ಲಿ ಒಂದಿಷ್ಟನ್ನು ದಾನ ಮಾಡುತ್ತೇನೆ. ಹಾಗೂ ಒಂದು ಮನೆ ಖರೀದಿಸುತ್ತೇನೆ” ಎಂದು ಸುನೀಲ ಕುಮಾರ ಕಾತೂರಿಯಾ ಗಲ್ಫ್ ನ್ಯೂಸ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.