31 ವರ್ಷದ ಹಿಂದೂ ಪತ್ರಕರ್ತನನ್ನ ಪಾಕಿಸ್ತಾನದಲ್ಲಿ ಹತ್ಯೆಗೈಯಲಾಗಿದೆ. ಸಿಂದ್ ಪ್ರಾಂತ್ಯದಲ್ಲಿ ಕ್ಷೌರ ಮಾಡಿಸಿಕೊಳ್ತಿದ್ದ ವೇಳೆ ಆಕ್ರಮಣಕಾರರ ಗುಂಪೊಂದು ಪತ್ರಕರ್ತನ ಮೇಲೆ ಗುಂಡು ಹಾರಿಸಿದೆ.
ಉರ್ದು ಭಾಷೆಯ ಪತ್ರಿಕೆ ಪುಚಾನೋ ಹಾಗೂ ಸ್ಥಳೀಯ ಟಿವಿ ಚಾನೆಲ್ ಒಂದರ ವರದಿಗಾರನಾಗಿದ್ದ ಅಜಯ್ ಲಾಲ್ವಾನಿ ಎಂಬವರನ್ನ ಕೊಲೆ ಮಾಡಲಾಗಿದೆ.
ಕ್ಷೌರಿಕನ ಅಂಗಡಿಯಲ್ಲಿ ಅಜಯ್ ಕುಳಿತುಕೊಂಡಿದ್ದ ವೇಳೆ 2 ಬೈಕ್ ಹಾಗೂ ಕಾರಿನಲ್ಲಿ ಬಂದ ದುಷ್ಕರ್ಮಿಗಳ ಗುಂಪು ಈ ಕೃತ್ಯ ಎಸಗಿದೆ.
ಈ ಕೃತ್ಯ ನಡೆಯುತ್ತಿದ್ದಂತೆಯೇ ಅಜಯ್ರನ್ನ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತಾದರೂ ಲಾಲ್ವಾನಿ ಸಾವನ್ನಪ್ಪಿದ್ದಾರೆ. ಲಾಲ್ವಾನಿ ತಂದೆ ತಮ್ಮ ಕುಟುಂಬ ಯಾರೊಂದಿಗೂ ದ್ವೇಷ ಹೊಂದಿರಲಿಲ್ಲ ಎಂದು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಮೂವರು ಶಂಕಿತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.