ರಿಯೋ-ಡಿ-ಜನೈರೊ: ಈಜು ಕೊಳದಲ್ಲಿ ಮುಳುಗುತ್ತಿದ್ದ ತನ್ನ ಸ್ನೇಹಿತನನ್ನು ಮೂರು ವರ್ಷದ ಬಾಲಕನೊಬ್ಬ ರಕ್ಷಿಸುವ ಮೂಲಕ ಪ್ರಸಿದ್ಧನಾಗಿದ್ದಾನೆ. ಬ್ರೆಜಿಲ್ನ ರಿಯೋ-ಡಿ-ಜನೈರೋದ ಉತ್ತರಕ್ಕಿರುವ ಇಟಾ ಪೆರುನಾ ಎಂಬಲ್ಲಿ ಘಟನೆ ನಡೆದಿದೆ.
ಆರ್ಥರ್ ಡೆ ಒಲಿವೆರಾ ಎಂಬ ಬಾಲಕ ತನ್ನ ಸ್ನೇಹಿತ ಹೆನ್ರಿಕ್ ನನ್ನು ಬಚಾವು ಮಾಡಿದ ವಿಡಿಯೋವನ್ನು ಆತನ ತಾಯಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾಳೆ. ಘಟನೆ ನಡೆದ ಸಂದರ್ಭದಲ್ಲಿ ಮಕ್ಕಳು ಮಾತ್ರ ಈಜು ಕೊಳದಲ್ಲಿದ್ದರು.
ಅರ್ಥರ್ ಈಜು ಕೊಳದ ಸಮೀಪ ಆಡುತ್ತಿದ್ದ. ಆ ಸಂದರ್ಭದಲ್ಲಿ ತನ್ನ ತಾಯಿಯ ಕಣ್ಣು ತಪ್ಪಿಸಿ ಅಲ್ಲಿಗೆ ಬಂದ ಕೊಳದ ಮೇಲ್ವಿಚಾರಕನ ಪುತ್ರ ಹೆನ್ರಿಕ್ ನೀರಿನ ಮೇಲೆ ತೇಲುತ್ತಿದ್ದ ಜೀವ ರಕ್ಷಕ ಬಲೂನನ್ನು ಹಿಡಿಯಲು ಯತ್ನಿಸಿದ.
ಈ ಸಂದರ್ಭದಲ್ಲಿ ಆಯತಪ್ಪಿ ಕೆಳಗೆ ಬಿದ್ದ. ಮೊದಲು ಆತಂಕಗೊಂಡು ಪಾಲಕರನ್ನು ಕರೆದ ಅರ್ಥರ್ ಕೊನೆಗೆ ತಾನೇ ತನ್ನ ಸ್ನೇಹಿತನಿಗೆ ಕೈ ಚಾಚಿ ಕಷ್ಟ ಪಟ್ಟು ಆತನನ್ನು ದಡಕ್ಕೆ ಎಳೆದುಕೊಳ್ಳುತ್ತಾನೆ. ಈ ಸಂದರ್ಭದ ವಿಡಿಯೋ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ಮನೆಯಲ್ಲಿ ಈಜುಕೊಳ ಹೊಂದಿದವರು ಮಕ್ಕಳ ಬಗ್ಗೆ ಎಚ್ಚರ ವಹಿಸಿ ಎಂದು ಅರ್ಥರ್ ತಾಯಿ ಪೊಲಿನಾ ಕೊನ್ಸೊಲ್ ಡೆ ಒಲಿವೆರಾ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
https://www.facebook.com/poliana.consoledeoliveira/videos/3888047744555071/?t=2
https://www.facebook.com/poliana.consoledeoliveira/videos/3900761243283721/?t=11