ಭಾರೀ ಗಾತ್ರದ ಮೊಸಳೆ ಮೂತಿಯ ಆಮೆಯೊಂದು ವರ್ಜೀನಿಯಾದ ವಸತಿ ಪ್ರದೇಶವೊಂದರಲ್ಲಿ ಕಾಣಿಸಿಕೊಂಡಿದೆ. ಲೇಡೆ ಫೇರ್‌ಫ್ಯಾಕ್ಸ್ ಎಂದು ಸಹ ಕರೆಯಲಾದ ಈ ಆಮೆಯು 29 ಕೆಜಿ ತೂಕ ತೂಗುತ್ತಿದೆ.
ಈ ಆಮೆಯು ದೊಡ್ಡದಾದ ಸಂದರ್ಭದಲ್ಲಿ 90 ಕೆಜಿಯಷ್ಟು ತೂಗಲಿದೆ ಎಂದು ತಜ್ಞರು ತಿಳಿಸುತ್ತಿದ್ದಾರೆ.
ಈ ಆಮೆಯನ್ನು ಪ್ರಾಣಿ ನಿಯಂತ್ರಣ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ಅದನ್ನು ಪ್ರಾಣಿಗಳ ಸೂರಿಗೆ ಕೊಂಡೊಯ್ದು, ಅಲ್ಲಿಂದ ಮೀನುಗಾರಿಕಾ ಇಲಾಖೆಗೆ ಹಸ್ತಾಂತರಿಸಿದ್ದಾರೆ.