alex Certify ಹಸಮಣೆ ಏರಬೇಕಿದ್ದ ಯುವತಿ ಸೆಲ್ಫಿಗೆ ಬಲಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಸಮಣೆ ಏರಬೇಕಿದ್ದ ಯುವತಿ ಸೆಲ್ಫಿಗೆ ಬಲಿ…!

ಇನ್ನು ಕೆಲ ದಿನಗಳಲ್ಲೇ ಹಸೆಮಣೆ ಏರಬೇಕಿದ್ದ ಯುವತಿಯೊಬ್ಬರು ಜಲಪಾತದ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋದ ವೇಳೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಈ ಘಟನೆ ಅಮೆರಿಕಾದ ಟೆನ್ನೆಸ್ಸೀ ಬಳಿ ನಡೆದಿದೆ.

ಆಂಧ್ರಪ್ರದೇಶದ ಪೊಲಾವರಪು ಕಮಲಾ ಮೃತಪಟ್ಟವರಾಗಿದ್ದು, ತಮ್ಮ ಭಾವಿ ಪತಿಯೊಡನೆ ಬಾಲ್ಡ್ ಜಲಪಾತಕ್ಕೆ ಪ್ರವಾಸ ತೆರಳಿದ್ದರು. ಈ ವೇಳೆ ಇಬ್ಬರೂ ಜಲಪಾತದ ಹಿನ್ನೆಲೆಯಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಬಿದ್ದಿದ್ದಾರೆ.

ಸ್ಥಳದಲ್ಲಿದ್ದವರು ಕಮಲಾ ಅವರ ಸಂಗಾತಿಯನ್ನು ರಕ್ಷಿಸಿದ್ದು, ಕಮಲಾ ಅವರನ್ನು ಮೇಲಕ್ಕೆತ್ತುವ ವೇಳೆಗಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಇಂಜಿನಿಯರಿಂಗ್ ಪದವೀಧರರಾಗಿದ್ದ ಕಮಲಾ ಉನ್ನತ ವ್ಯಾಸಂಗಕ್ಕೆ ಅಮೆರಿಕಾಕ್ಕೆ ತೆರಳಿದ್ದರೆಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...