alex Certify 2020 ರಲ್ಲಿ ದಾಖಲಾಗಿದೆ ಹಿಂದೆಂದೂ ಕಂಡಿರದ ತಾಪಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2020 ರಲ್ಲಿ ದಾಖಲಾಗಿದೆ ಹಿಂದೆಂದೂ ಕಂಡಿರದ ತಾಪಮಾನ

ಕ್ಯಾಲಿಫೋರ್ನಿಯಾದಿಂದ ಸೈಬೀರಿಯಾದವರೆಗೆ ಉಂಟಾದ ಭಯಾನಕ ಕಾಡ್ಗಿಚ್ಚು ಹಾಗೂ ಅಟ್ಲಾಂಟಿಕದಲ್ಲಿ ದಾಖಲೆಯ ಉಷ್ಣವಲಯದ ಚಂಡಮಾರುತಗಳನ್ನ ಕಂಡ 2020ರ ವರ್ಷವನ್ನ ಅತಿ ಹೆಚ್ಚು ತಾಪಮಾನದ ವರ್ಷ ಎಂದು ಪರಿಗಣಿಸಲಾಗಿದೆ ಎಂದು ಅನೇಕ ವೈಜ್ಞಾನಿಕ ಪ್ರಕಟಣೆಗಳು ತಿಳಿಸಿವೆ.

2016ರಲ್ಲೂ ಕೂಡ ಭೂಮಿಯ ತಾಪಮಾನ ಏರಿಕೆ ಕಂಡಿತ್ತು. ನಾಸಾ, ನ್ಯಾಷನಲ್​ ಓಷಿಯಾನಿಕ್​ ಹಾಗೂ ವಾತಾವರಣ ಮೇಲ್ವಿಚಾರಣೆ, ಬ್ರಿಟನ್​ನ ಮೆಟ್​ ಕಚೇರಿ ಹಾಹೂ ಬರ್ಕ್ಲಿ ಅರ್ಥ್​ನ ಫಲಿತಾಂಶಗಳ ಪ್ರಕಾರ 1800ರ ಬಳಿಕ 2016 ಹೆಚ್ಚು ತಾಪಮಾನ ಕಂಡಿತ್ತು. ಆದರೆ ಇದೀಗ 2020 ಅದಕ್ಕಿಂತಲೂ ಹೆಚ್ಚು ತಾಪಮಾನ ಕಂಡಿದೆ ಎಂದು ಹೇಳಲಾಗಿದೆ.

ಕಳೆದ 7 ವರ್ಷಗಳು ದಾಖಲೆಯ ತಾಪಮಾನದ ವರ್ಷಗಳಾಗಿವೆ ಎಂದು ಎನ್​ಒಎಯ ಪರಿಸರ ಮಾಹಿತಿ ರಾಷ್ಟ್ರೀಯ ಕೇಂದ್ರಗಳ ಹವಾಮಾನ ಇಲಾಖೆ ತಜ್ಞ ಅಹಿರಾ ಸಾಂಜೆಝ್​​ ಲುಗೋ ಹೇಳಿದ್ದಾರೆ. 2005ರಿಂದ 10 ತಾಪಮಾನದ ವರ್ಷಗಳನ್ನ ಈ ಭೂಮಿ ನೋಡಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...