ಕ್ಯಾಲಿಫೋರ್ನಿಯಾದಿಂದ ಸೈಬೀರಿಯಾದವರೆಗೆ ಉಂಟಾದ ಭಯಾನಕ ಕಾಡ್ಗಿಚ್ಚು ಹಾಗೂ ಅಟ್ಲಾಂಟಿಕದಲ್ಲಿ ದಾಖಲೆಯ ಉಷ್ಣವಲಯದ ಚಂಡಮಾರುತಗಳನ್ನ ಕಂಡ 2020ರ ವರ್ಷವನ್ನ ಅತಿ ಹೆಚ್ಚು ತಾಪಮಾನದ ವರ್ಷ ಎಂದು ಪರಿಗಣಿಸಲಾಗಿದೆ ಎಂದು ಅನೇಕ ವೈಜ್ಞಾನಿಕ ಪ್ರಕಟಣೆಗಳು ತಿಳಿಸಿವೆ.
2016ರಲ್ಲೂ ಕೂಡ ಭೂಮಿಯ ತಾಪಮಾನ ಏರಿಕೆ ಕಂಡಿತ್ತು. ನಾಸಾ, ನ್ಯಾಷನಲ್ ಓಷಿಯಾನಿಕ್ ಹಾಗೂ ವಾತಾವರಣ ಮೇಲ್ವಿಚಾರಣೆ, ಬ್ರಿಟನ್ನ ಮೆಟ್ ಕಚೇರಿ ಹಾಹೂ ಬರ್ಕ್ಲಿ ಅರ್ಥ್ನ ಫಲಿತಾಂಶಗಳ ಪ್ರಕಾರ 1800ರ ಬಳಿಕ 2016 ಹೆಚ್ಚು ತಾಪಮಾನ ಕಂಡಿತ್ತು. ಆದರೆ ಇದೀಗ 2020 ಅದಕ್ಕಿಂತಲೂ ಹೆಚ್ಚು ತಾಪಮಾನ ಕಂಡಿದೆ ಎಂದು ಹೇಳಲಾಗಿದೆ.
ಕಳೆದ 7 ವರ್ಷಗಳು ದಾಖಲೆಯ ತಾಪಮಾನದ ವರ್ಷಗಳಾಗಿವೆ ಎಂದು ಎನ್ಒಎಯ ಪರಿಸರ ಮಾಹಿತಿ ರಾಷ್ಟ್ರೀಯ ಕೇಂದ್ರಗಳ ಹವಾಮಾನ ಇಲಾಖೆ ತಜ್ಞ ಅಹಿರಾ ಸಾಂಜೆಝ್ ಲುಗೋ ಹೇಳಿದ್ದಾರೆ. 2005ರಿಂದ 10 ತಾಪಮಾನದ ವರ್ಷಗಳನ್ನ ಈ ಭೂಮಿ ನೋಡಿದೆ ಎಂದು ಹೇಳಿದ್ದಾರೆ.