alex Certify 2020ರಲ್ಲಿ ಅತಿ ಹೆಚ್ಚು ಬಳಕೆಯಾದ ಪದ ಯಾವುದು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2020ರಲ್ಲಿ ಅತಿ ಹೆಚ್ಚು ಬಳಕೆಯಾದ ಪದ ಯಾವುದು ಗೊತ್ತಾ..?

ಕೊರೊನಾ ವೈರಸ್​ನ್ನು ನಿಯಂತ್ರಿಸುವ ದೃಷ್ಟಿಯಲ್ಲಿ ವಿಶ್ವದ ಅನೇಕ ರಾಷ್ಟ್ರಗಳು ಜಾರಿಗೆ ತಂದ ಮುನ್ನೆಚ್ಚರಿಕಾ ಕ್ರಮಗಳಲ್ಲಿ ಒಂದಾದ ಲಾಕ್​ಡೌನ್​​ನನ್ನು 2020ರ ವರ್ಷದಲ್ಲಿ ಅತಿ ಹೆಚ್ಚು ಬಳಕೆಯಾದ ಶಬ್ದ ಎಂದು ಕಾಲಿನ್ಸ್ ನಿಘಂಟು ಗುರುತಿಸಿದೆ.

ಕಾಲಿನ್ಸ್​ ಡಿಕ್ಶನರಿ ಲಾಕ್​ಡೌನ್​ ಪದವನ್ನ, ಪ್ರಯಾಣ, ಸಾಮಾಜಿಕ ಸಂವಹನ ಹಾಗೂ ಸಾರ್ವಜನಿಕ ಸ್ಥಳಗಳ ಪ್ರವೇಶಕ್ಕೆ ಕಠಿಣ ನಿರ್ಬಂಧ ಹೇರುವ ಪ್ರಕ್ರಿಯೆ ಅಂತಾ ವ್ಯಾಖ್ಯಾನಿಸಿದೆ.

ಲಾಕ್ಡೌನ್ ವಿಶ್ವದ ಶತಕೋಟಿ ಜನರಿಗೆ ಒಂದೇ ಬಾರಿಗೆ ಅನುಭವ ನೀಡಿದೆ. ಕೊರೊನಾ ತಡೆಗಟ್ಟಲು ವಿಶ್ವದ ಜನರೆಲ್ಲ ಒಟ್ಟಾಗಿ ಲಾಕ್​ಡೌನ್​ ನಿಯಮ ಪಾಲಿಸಿದ್ದಾರೆ ಅಂತಾ ಕಾಲಿನ್ಸ್ ಪ್ರಕಾಶಕ ಹಾರ್ಪರ್​ ಕಾಲಿನ್ಸ್ ಹೇಳಿದ್ದಾರೆ.

2020ರಲ್ಲಿ ಅತಿ ಹೆಚ್ಚು ಬಳಕೆಯಾದ 10 ಪದಗಳಲ್ಲಿ 6 ಪದಗಳು ಕೊರೊನಾಗೆ ಸಂಬಂಧಿಸಿದ್ದಾಗಿವೆ. ಕೊರೊನಾ ವೈರಸ್, ಸಾಮಾಜಿಕ ಅಂತರ, ಸ್ವಯಂ ಪ್ರತ್ಯೇಕತೆ, ಫರ್ಲೋ, ಲಾಕ್​ಡೌನ್​ ಹಾಗೂ ಕೀ ವರ್ಕರ್​​ ಎಂಬ ಶಬ್ದಗಳು ಅತಿ ಹೆಚ್ಚು ಬಳಕೆಯಾದ ಟಾಪ್​ 10 ಪಟ್ಟಿಗಳಲ್ಲಿ ಸ್ಥಾನ ಪಡೆದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...