ಕೊರೊನಾ ವೈರಸ್ನ್ನು ನಿಯಂತ್ರಿಸುವ ದೃಷ್ಟಿಯಲ್ಲಿ ವಿಶ್ವದ ಅನೇಕ ರಾಷ್ಟ್ರಗಳು ಜಾರಿಗೆ ತಂದ ಮುನ್ನೆಚ್ಚರಿಕಾ ಕ್ರಮಗಳಲ್ಲಿ ಒಂದಾದ ಲಾಕ್ಡೌನ್ನನ್ನು 2020ರ ವರ್ಷದಲ್ಲಿ ಅತಿ ಹೆಚ್ಚು ಬಳಕೆಯಾದ ಶಬ್ದ ಎಂದು ಕಾಲಿನ್ಸ್ ನಿಘಂಟು ಗುರುತಿಸಿದೆ.
ಕಾಲಿನ್ಸ್ ಡಿಕ್ಶನರಿ ಲಾಕ್ಡೌನ್ ಪದವನ್ನ, ಪ್ರಯಾಣ, ಸಾಮಾಜಿಕ ಸಂವಹನ ಹಾಗೂ ಸಾರ್ವಜನಿಕ ಸ್ಥಳಗಳ ಪ್ರವೇಶಕ್ಕೆ ಕಠಿಣ ನಿರ್ಬಂಧ ಹೇರುವ ಪ್ರಕ್ರಿಯೆ ಅಂತಾ ವ್ಯಾಖ್ಯಾನಿಸಿದೆ.
ಲಾಕ್ಡೌನ್ ವಿಶ್ವದ ಶತಕೋಟಿ ಜನರಿಗೆ ಒಂದೇ ಬಾರಿಗೆ ಅನುಭವ ನೀಡಿದೆ. ಕೊರೊನಾ ತಡೆಗಟ್ಟಲು ವಿಶ್ವದ ಜನರೆಲ್ಲ ಒಟ್ಟಾಗಿ ಲಾಕ್ಡೌನ್ ನಿಯಮ ಪಾಲಿಸಿದ್ದಾರೆ ಅಂತಾ ಕಾಲಿನ್ಸ್ ಪ್ರಕಾಶಕ ಹಾರ್ಪರ್ ಕಾಲಿನ್ಸ್ ಹೇಳಿದ್ದಾರೆ.
2020ರಲ್ಲಿ ಅತಿ ಹೆಚ್ಚು ಬಳಕೆಯಾದ 10 ಪದಗಳಲ್ಲಿ 6 ಪದಗಳು ಕೊರೊನಾಗೆ ಸಂಬಂಧಿಸಿದ್ದಾಗಿವೆ. ಕೊರೊನಾ ವೈರಸ್, ಸಾಮಾಜಿಕ ಅಂತರ, ಸ್ವಯಂ ಪ್ರತ್ಯೇಕತೆ, ಫರ್ಲೋ, ಲಾಕ್ಡೌನ್ ಹಾಗೂ ಕೀ ವರ್ಕರ್ ಎಂಬ ಶಬ್ದಗಳು ಅತಿ ಹೆಚ್ಚು ಬಳಕೆಯಾದ ಟಾಪ್ 10 ಪಟ್ಟಿಗಳಲ್ಲಿ ಸ್ಥಾನ ಪಡೆದಿವೆ.