ಇಪ್ಪತ್ತು ವರ್ಷಗಳ ಹಿಂದೆ ಕಳೆದುಹೋಗಿದ್ದ ವಾಲೆಟ್ ಒಂದನ್ನು ಅದರ ನಿಜವಾದ ಮಾಲೀಕರಿಗೆ ತಲುಪಿಸಿದ್ದಾಗಿ ಐರ್ಲೆಂಡ್ನ ಡಬ್ಲಿನ್ ಪೊಲೀಸರು ತಿಳಿಸಿದ್ದಾರೆ.
ಡಬ್ಲಿನ್ನ ತಲ್ಲಘ್ಟ್ನ ಪೊಲೀಸರು ಈ ವಾಲೆಟ್ನ ಚಿತ್ರವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ’20 ವರ್ಷಗಳ ಮಿಸ್ಟರಿಯನ್ನು 24 ಗಂಟೆಗಳಲ್ಲಿ ಪರಿಹರಿಸಿದ್ದೇವೆ’ ಎಂದು ತಿಳಿಸಿದ್ದಾರೆ.
ವಾಲೆಟ್ನಲ್ಲಿ VISA ಕ್ರೆಡಿಟ್ ಕಾರ್ಡ್, ಹಾಗೂ 2001ರ ಇಸವಿಯ ವಿದ್ಯಾರ್ಥಿ ಗುರುತಿನ ಚೀಟಿ ಹಾಗೂ ವಾಲೆಟ್ನ ಮಾಲೀಕರ ವಿಳಾಸದ ವಿವರಗಳು ಕಂಡುಬಂದಿವೆ. ಬಹಳ ದಿನಗಳಿಂದ ಹೂತುಹೋಗಿದ್ದ ಈ ವಾಲೆಟ್ ಅನ್ನು ತೆಗೆದು ನೋಡಿ, ಅದರಲ್ಲಿದ್ದ ವಿವರಗಳನ್ನು ಆಧರಿಸಿ ಅದರ ಮಾಲೀಕರಿಗೆ ತಲುಪಿಸಿದ್ದಾರೆ ಪೊಲೀಸರು.
https://www.facebook.com/angardasiochana/posts/10158498909023001