alex Certify ಚರಂಡಿಯೊಳಗೆ ಸಿಲುಕಿದ್ದ ನಾಯಿಯ ರಕ್ಷಣೆಗೆ ಮುಂದಾದ ಅಗ್ನಿಶಾಮಕ ಸಿಬ್ಬಂದಿಗೆ ನೆಟ್ಟಿಗರ ಶಹಬ್ಬಾಸ್‌ಗಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚರಂಡಿಯೊಳಗೆ ಸಿಲುಕಿದ್ದ ನಾಯಿಯ ರಕ್ಷಣೆಗೆ ಮುಂದಾದ ಅಗ್ನಿಶಾಮಕ ಸಿಬ್ಬಂದಿಗೆ ನೆಟ್ಟಿಗರ ಶಹಬ್ಬಾಸ್‌ಗಿರಿ

ಅಂಡರ್‌ ಗ್ರೌಂಡ್‌ ಚರಂಡಿಯೊಳಗೆ ಸಿಕ್ಕಿಹಾಕಿಕೊಂಡಿದ್ದ ಎರಡು ವರ್ಷದ ಸೋಫಿ ಹೆಸರಿನ ನಾಯಿ ಮರಿಯೊಂದನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿಗೆ ನೆಟ್ಟಿಗರು ಶಹಬ್ಬಾಸ್ ಹೇಳುತ್ತಿದ್ದಾರೆ.

ಕ್ಯಾಲಿಫೋರ್ನಿಯಾದ ಸಾಂಟಾ ಬಾರ್ಬರಾ ವಿವಿಯ ಕ್ಯಾಂಪಸ್‌ನಲ್ಲಿ ಕಳೆದ ಮೂರು ದಿನಗಳಿಂದ ಈ ಚರಂಡಿಯೊಳಗೆ ಸಿಕ್ಕಿಹಾಕಿಕೊಂಡಿದ್ದ ನಾಯಿಗೆ ಬಹಳ ಕಿರಿದಾದ ಕೊಳವೆಯಿಂದ ಆಚೆ ಬರಲು ಕಷ್ಟವಾಗುತ್ತಿತ್ತು.

ನಾಯಿಯ ಮಾಲೀಕರು ಅದನ್ನು ಹುಡುಕಲು ಮಾಡಿದ ಯತ್ನಗಳೆಲ್ಲಾ ವಿಫಲವಾಗಿ, ಕೊನೆಗೆ ಅದರ ಚಿತ್ರವನ್ನು ಎಲ್ಲಡೆ ನೇತುಹಾಕಿ ಹುಡುಕಿಕೊಡಲು ಕೋರಿಕೊಂಡಿದ್ದರು. 20 ನಿಮಿಷಗಳ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ, ನಾಯಿಯನ್ನು ರಕ್ಷಿಸಿ ಕುಟುಂಬಕ್ಕೆ ಮರಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...