ಇತ್ತೀಚಿನ ವರ್ಷಗಳಲ್ಲಿ ಹಿಂಸಾತ್ಮಕ ಪ್ರಾದೇಶಿಕ ವಿವಾದಗಳನ್ನ ಕಾಣುತ್ತಿರುವ ಟೆಕ್ಸಾಸ್ನ ರಿಯೋ ಗ್ರಾಂಡೆ ಪಟ್ಟಣದ ಬಳಿಯಲ್ಲಿ ಸುಟ್ಟು ಕರಕಲಾದ 19 ಮಂದಿಯ ಮೃತದೇಹ ಪತ್ತೆಯಾಗಿದೆ ಎಂದು ಮೆಕ್ಸಿಕನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕ್ಯಾಮಾರ್ಗೋ ಹೊರಗಿನ ಕಚ್ಚಾ ರಸ್ತೆಯಲ್ಲಿ ಶವಗಳನ್ನ ಪತ್ತೆ ಮಾಡಲಾಗಿದೆ ಎಂದು ತಮೌಲಿಪಾಸ್ ಸ್ಟೇಟ್ ಪ್ರಾಸಿಕ್ಯೂಟರ್ ಕಚೇರಿ ಮಾಹಿತಿ ನೀಡಿದೆ. ಈ ರಸ್ತೆಯಲ್ಲಿ ಎರಡು ವಾಹನಗಳಲ್ಲಿ ಬೆಂಕಿ ಹತ್ತಿ ಉರಿಯುತ್ತಿತ್ತು. ಒಂದು ಗಾಡಿಯಲ್ಲಿ ನಾಲ್ಕು ಮೃತದೇಹಗಳು ಸಿಕ್ಕಿದ್ರೆ ಇನ್ನೊಂದು ವಾಹನದಲ್ಲಿ 15 ಮಂದಿಯ ಮೃತದೇಹ ಪತ್ತೆಯಾಗಿದೆ.
ಮೃತರಾದವರನ್ನೆಲ್ಲ ಬೇರೆ ಎಲ್ಲೋ ಕೊಂದು ಇಲ್ಲಿ ಸುಡಲಾಗಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಘಟನೆ ಶುಕ್ರವಾರದಂದೇ ನಡೆದಿದ್ದು ಜನ ಅದನ್ನ ಬಹಿರಂಗ ಮಾಡಲು ಹೆದರಿದ್ದರು ಎಂದು ಹೇಳಿದ್ದಾರೆ.