alex Certify 17 ವರ್ಷದ ಹುಡುಗಿಯ ಅದ್ಭುತ ಸಾಧನೆ: ಅತಿ ಚಿಕ್ಕ ವಯಸ್ಸಿಗೆ ಡಾಕ್ಟರೇಟ್​ ಪದವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

17 ವರ್ಷದ ಹುಡುಗಿಯ ಅದ್ಭುತ ಸಾಧನೆ: ಅತಿ ಚಿಕ್ಕ ವಯಸ್ಸಿಗೆ ಡಾಕ್ಟರೇಟ್​ ಪದವಿ

ಅಮೆರಿಕ ಮೊಂಟಾನಾದ ನಿವಾಸಿಯಾಗಿರುವ ಡಾ. ಕಿಂಬರ್ಲಿ ಸ್ಟ್ರಾಬಲ್ ಎಂಬ 17 ವರ್ಷದ ಯುವತಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್​ ಪದವಿ ಪಡೆದಿದ್ದಾರೆ.

ಈ ಮೂಲಕ ಉದ್ಯಮ ವಿಭಾಗದಲ್ಲಿ ಡಾಕ್ಟರೇಟ್​ ಪದವಿ ಪಡೆದ ಜಗತ್ತಿನ ಅತಿ ಚಿಕ್ಕ ವಯಸ್ಸಿನ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಿಶ್ವದಲ್ಲಿ ಅತಿ ಚಿಕ್ಕ ವಯಸ್ಸಿಗೆ ಡಾಕ್ಟರೇಟ್​ ಪದವಿ ಪಡೆದವರಲ್ಲಿ ನಾನು ಮೂರನೆಯವಳಾಗಿದ್ದೇನೆ. ಅಲ್ಲದೇ ಉದ್ಯಮ ವಿಭಾಗದಲ್ಲಿ ಡಾಕ್ಟರೇಟ್​ ಪದವಿ ಪಡೆದ ಅತಿ ಚಿಕ್ಕ ವಯಸ್ಸಿನ ವ್ಯಕ್ತಿಯಾಗಿದ್ದೇನೆ ಎಂದು ಕಿಂಬರ್ಲಿ ತಮ್ಮ ಸಂತಸವನ್ನ ಹೊರಹಾಕಿದ್ದಾರೆ.

ಅವಳು ಡಾಕ್ಟರೇಟ್​ ಪದವಿ ಪಡೆದುಕೊಳ್ಳುವ ಹಾದಿಯಲ್ಲಿ ನಾವೆಲ್ಲ ಶ್ರಮಿಸಿದ್ದೇವೆ. ಆಕೆಗೆ ನಮ್ಮೆಲ್ಲರ ಬೆಂಬಲವಿದೆ. ಮಕ್ಕಳು ಏನನ್ನಾದರೂ ಸಾಧಿಸಲು ಮುಂದಾದರೆ ನಮ್ಮ ಪ್ರೋತ್ಸಾಹ ಎಂದಿಗೂ ಇರುತ್ತೆ ಎಂದು ಕಿಂಬರ್ಲಿ ತಂದೆ ಗ್ರೆಗ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...