ಅಮೆರಿಕ ಮೂಲದ 16 ವರ್ಷದ ಬಾಲಕಿಯೊಬ್ಬಳು ಇಂಗ್ಲಿಷ್ ಚಾನಲ್ನ ಒಟ್ಟು 55 ಕಿಮೀ ಈಜಾಡುವ ಮೂಲಕ ಅನೇಕರ ಹುಬ್ಬೇರಿಸುವಂತೆ ಮಾಡಿದ್ದಾಳೆ.
ವಿರಾ ರಿವರ್ಡ್ ಎನ್ನುವ ಬಾಲಕಿ ಯು.ಕೆ.ಯ ಡೊವೆರ್ನಿಂದ ತನ್ನ ಈಜನ್ನು ಆರಂಭಿಸಿದಳು. ಮಂಗಳವಾರ ಬೆಳಗ್ಗೆ 9.30ಕ್ಕೆ ಆರಂಭಿಸಿದ ಬಾಲಕಿ 14 ಗಂಟೆಯ ಅವಧಿಯಲ್ಲಿ ಫ್ರಾನ್ಸ್ನ ಕಲಇಸ್ಗೆ ತಲುಪಿದ್ದಾಳೆ. 18 ಡಿಗ್ರಿ ತಾಪಮಾನದ ನೀರಿನಲ್ಲಿ 53 ಕಿಮೀ ಕ್ರಮಿಸಿದ ಆಕೆಗೆ, ಮುಂದೆ ಒಂದು ಹಡಗು ಮಾರ್ಗದರ್ಶನ ಮಾಡುತ್ತಿತ್ತು.
ಮಗಳ ಸಾಧನೆಯ ಬಗ್ಗೆ ಆಕೆಯ ತಾಯಿ ಡಾರ್ಸಿ ಡಿಬ್ಲೊಯಿಸ್ ಮಾತನಾಡಿದ್ದು, ನನ್ನ ಮಗಳು ಎಷ್ಟು ಗಂಟೆಯಲ್ಲಿ ಮುಗಿಸುತ್ತಾಳೆ? ಅರ್ಧ ನಿಲ್ಲಿಸುವಳೇ ಎನ್ನುವುದು ಮುಖ್ಯವಾಗಿರಲಿಲ್ಲ. ಬದಲಿಗೆ ಈ ವಯಸ್ಸಿನಲ್ಲಿಯೇ ಈ ಸಾಹಸಕ್ಕೆ ಕೈ ಹಾಕಿದ್ದು ನಮಗೆ ಖುಷಿ ಎಂದಿದ್ದಾರೆ.
https://www.facebook.com/darcie.debloisrivard/posts/3851382821545572
https://www.facebook.com/darcie.debloisrivard/posts/3856223247728196
https://www.facebook.com/darcie.debloisrivard/posts/3854281001255754