ಅಮೆರಿಕ ಇಲಿನಾಯ್ಸ್ ರಾಜ್ಯದ 12 ವರ್ಷದ ಬಾಲನೊಬ್ಬ ಪಾಪ್ಸಿಕಲ್ ಕಡ್ಡಿಗಳನ್ನು ಬಳಸಿಕೊಂಡು ಅತ್ಯಂತ ಎತ್ತರ ಪ್ರತಿಮೆ ರಚಿಸುವ ಮೂಲಕ ಗಿನ್ನೆಸ್ ದಾಖಲೆಯ ಪುಸ್ತಕ ಸೇರಿಕೊಂಡಿದ್ದಾನೆ.
ಷಿಕಾಗೋದ ನೇಪರ್‌ವಿಲ್ಲೆ ಉಪನಗರದ ನಿವಾಸಿಯಾದ ಎರಿಕ್ ಕ್ಲಾಬೆಲ್ ಹೆಸರಿನ ಈ ಬಾಲಕ ಒಂದು ತಿಂಗಳ ಮಟ್ಟಿಗೆ ತನ್ನೆಲ್ಲಾ ಏಕಾಗ್ರತೆಯನ್ನು ಬಳಸಿಕೊಂಡು 1,750 ಕಡ್ಡಿಗಳು ಹಾಗೂ 2 ಪೌಂಡ್‌ಗಳಷ್ಟು ಗೋಂದನ್ನು ಬಳಸಿಕೊಂಡು ಈ ಎತ್ತರದ ರಚನೆ ನಿರ್ಮಿಸಿದ್ದಾನೆ. ಪ್ರಬಲವಾದ ಬುಡದ ಮೇಲೆ ಈ ಎತ್ತರದ ಕಲಾಕೃತಿಯನ್ನು ಏರಿಸಿದ್ದಾನೆ ಈ ಬಾಲಕ.
ಐಫೋನ್ ಬದಲಿಗೆ ಬಂದದ್ದೇನೆಂಬುದನ್ನು ನೋಡಿ ದಂಗಾದ ಮಹಿಳೆ
6.157 ಮೀಟರ್ (20.2 ಅಡಿ) ಎತ್ತರದ ಈ ಕಲಾಕೃತಿ ರಚಿಸುವ ಮುನ್ನ ಬಹಳಷ್ಟು ತಯಾರಿ ನಡೆಸಿದ್ದಾಗಿ ಕ್ಲಾಬೆಲ್ ತಿಳಿಸಿದ್ದಾನೆ. 2015ರಿಂದಲೂ ಮರುಬಳಕೆ ಮಾಡಬಲ್ಲ ವಸ್ತುಗಳನ್ನು ಬಳಸಿಕೊಂಡು ಕಲಾಕೃತಿಗಳನ್ನು ರಚಿಸುವುದನ್ನು ತನ್ನ ತಂದೆಯಿಂದ ಕಲಿತ ಕ್ಲಾಬೆಲ್ ಗಿನ್ನೆಸ್ ದಾಖಲೆಗಳ ವಿಡಿಯೋಗಳನ್ನು ನೋಡುವ ಗೀಳು ಬೆಳೆಸಿಕೊಂಡು ಮುಂದೊಂದು ದಿನ ತಾನೂ ವಿಶ್ವದಾಖಲೆ ನಿರ್ಮಿಸಬೇಕೆಂಬ ಕನಸು ಕಂಡಿದ್ದನು.