alex Certify ಒಡಹುಟ್ಟಿದ ಈ 12 ಮಂದಿಯ ಒಟ್ಟು ವಯಸ್ಸು 1042 ವರ್ಷಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಡಹುಟ್ಟಿದ ಈ 12 ಮಂದಿಯ ಒಟ್ಟು ವಯಸ್ಸು 1042 ವರ್ಷಗಳು…!

12 ಮಂದಿ ಒಡಹುಟ್ಟಿದವರ ಬಳಗವೊಂದು, ವಿಶ್ವದ ಅತ್ಯಂತ ಹಿರಿಯ ಒಡಹುಟ್ಟಿದವರ ಬಳಗ ಎಂಬ ಗಿನ್ನೆಸ್ ದಾಖಲೆಗೆ ಭಾಜನವಾಗಿದೆ. ಈ 12 ಮಂದಿ ಒಡಹುಟ್ಟಿದವರ ಒಟ್ಟು ವಯಸ್ಸು 1042 ವರ್ಷಗಳು 315 ದಿನಗಳು ಆಗಿವೆ.

ಈ ಎಲ್ಲಾ ಒಡಹುಟ್ಟಿದವರ ವಯಸ್ಸುಗಳು 75-97 ವರ್ಷಗಳ ನಡುವೆ ಇದೆ. “ಇದು ಬಹಳ ಹಿತಾನುಭವವಾಗಿದೆ. ನಾವೆಲ್ಲಾ ಇನ್ನೂ ಸಹ ಒಟ್ಟಾಗಿ ಇದ್ದೇವೆ ಎನ್ನುವುದು ಹೆಮ್ಮೆಯ ವಿಷಯ” ಎನ್ನುತ್ತಾರೆ ಒಡಹುಟ್ಟಿದವರಲ್ಲಿ ಒಬ್ಬರಾದ 91 ವರ್ಷದ ಜಾಯ್ಸ್‌ ಡಿಸೋಜಾ.

ಒಂಬತ್ತು ಸಹೋದರಿಯರು ಹಾಗೂ ಮೂವರು ಸಹೋದರರ ಈ ಒಡಹುಟ್ಟಿದವರ ಬಳಗವು ಸಿಸಿಲಿಯಾ ಹಾಗೂ ಮೈಕೆಲ್ ದಂಪತಿಗಳ ಕುಡಿಗಳಾಗಿವೆ. ಇವರೆಲ್ಲರ ಜನನ ಇಂದಿನ ಪಾಕಿಸ್ತಾನದ ಕರಾಚಿಯಲ್ಲಾಗಿದೆ. ಸದ್ಯ ಈ ಒಡಹುಟ್ಟಿದವರೆಲ್ಲಾ ಅಮೆರಿಕ, ಕೆನಡಾ ಹಾಗೂ ಸ್ವಿಜರ್ಲೆಂಡ್‌ಗಳಲ್ಲಿ ವಾಸವಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...